ಬಸವಕಲ್ಯಾಣದಲ್ಲಿ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಮಂಗಲ ಸಮಾರಂಭದಲ್ಲಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು. ಪೂಜ್ಯ ಸತ್ಯಕ್ಕತಾಯಿ, ಶ್ರೀಶೈಲ ಹುಡೇದ, ಲಕ್ಷ್ಮೀಬಾಯಿ ಪಾಟೀಲ , ಪೂಜ್ಯ ಶ್ರೀಶೈಲ ಸ್ವಾಮಿ, ಗಣಪತಿ ಕಾಸ್ತೆ, ಶಾಮರಾವಸಿಂಗ್​, ನಾಗಪ್ಪ ನಿಣ್ಣೆ, ಜಯಶ್ರೀ ಪಾಟೀಲ, ಸುಲೋಚನಾ ಗುದಗೆ, ಸಂಗೀತಾ ಪಟ್ನೆ, ಮಲ್ಲಿಕಾರ್ಜುನ ದಯಾಡೆ, ಸುಧೀರ ವಾಡೇಕರ್​ ಇತರರಿದ್ದರು 
ಬೀದರ್

ಶರಣರ ಚರಿತ್ರೆ ಅಧ್ಯಯನ ಮಾಡಿ

ಬಸವಕಲ್ಯಾಣ: ವಚನ ಪಠಣವು ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ, ಸಕರಾತ್ಮಕ ಚಿಂತನೆಯನ್ನು ನೀಡುತ್ತದೆ. ವಚನಗಳನ್ನು ನಮ್ಮ ನಡೆ ನುಡಿಯಲ್ಲಿ ಪ್ರತಿಫಲಿಸಿದಾಗ ಮಾತ್ರ ಶರಣರ ಆಶಯ ಸಾಕಾರವಾಗುತ್ತದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಮಂಗಳವಾರ ಸಂಜೆ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಚನಗಳ ಸಂದೇಶಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅನುಸರಿಸಿದರೆ ಉತ್ತಮ ವ್ಯಕ್ತಿ, ಉತ್ತಮ ಕುಟುಂಬ ಮತ್ತು ಉತ್ತಮ ಸಮಾಜ ನಿರ್ಮಿಸಬಹುದು. ಪ್ರತಿಯೊಬ್ಬರೂ ನಿತ್ಯ ಇಷ್ಟಲಿಂಗ ಪೂಜೆ, ಯೋಗ, ವಚನ ಪಠಣ, ಶರಣರ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ನೇತೃತ್ವ ವಹಿಸಿದ್ದ ಪೂಜ್ಯ ಸತ್ಯಕ್ಕತಾಯಿ, ಅಧ್ಯಕ್ಷತೆ ವಹಿಸಿದ್ದ ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಹುಡೇದ, ಲಕ್ಷಿ$್ಮಬಾಯಿ ಪಾಟೀಲ ಮಾತನಾಡಿದರು. ಪೂಜ್ಯ ಶ್ರೀಶೈಲ ಸ್ವಾಮಿ, ಗಣಪತಿ ಕಾಸ್ತೆ, ಶಾಮರಾವಸಿಂಗ್​, ನಾಗಪ್ಪ ನಿಣ್ಣೆ, ಜಯಶ್ರೀ ಪಾಟೀಲ, ಸುಲೋಚನಾ ಗುದಗೆ, ಸಂಗೀತಾ ಪಟ್ನೆ, ಮಲ್ಲಿಕಾರ್ಜುನ ದಯಾಡೆ, ಸುಧೀರ ವಾಡೇಕರ್​ಇದ್ದರು.

ಇದಕ್ಕೂ ಮೊದಲು ಅಕ್ಕನ ಬಳಗದಿಂದ ವಚನ ಸಂಗೀತದೊಂದಿಗೆ 108 ಸಾಮೂಹಿಕ ವಚನಗಳ ಪಠಣ ನಡೆಯಿತು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಬೋಸಗಾ ವಚನ ಸಂಗಿತ ಜರುಗಿತು. ನಾಗಮ್ಮ ಕೌಡಾಳೆ ನಿರೂಪಣೆ ಮಾಡಿದರು.