ಹುಲಸೂರು: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಿದರೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಸರ್ಕಾರ ಗ್ರಾಪಂಗೆ ಒಂದು ಪಿಕೆಪಿಎಸ್ ಪ್ರಾರಂಭ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ, ಮಹಾಸಭೆ ಅಧ್ಯಕ್ಷ ಮಲ್ಲಪ್ಪ ಧಬಾಲೆ ಆಗ್ರಹಿಸಿದರು.
ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರೆದಿದ್ದ ಪಿಕೆಪಿಎಸ್ ಸಂಘದ 70ನೇವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಲಸೂರು ಪಿಕೆಪಿಎಸ್ಸಂಘದ ವ್ಯಾಪ್ತಿಯಲ್ಲಿ ಮೂರು ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿ ಕೇಂದ್ರವಾದ ತೊಗಲೂರು ಗ್ರಾಮದಲ್ಲಿ ಪಿಕೆಪಿಎಸ್ ಸಂಘ ಪ್ರಾರಂಭ ಮಾಡಬೇಕು ಎಂದು ಹೇಳಿದರು.
ಮಾಜಿ ಜಿಪಂ ಅಧ್ಯಕ್ಷ ಅನೀಲ ಭೂಸಾರೆ ಮಾತನಾಡಿ, ಆಡಳಿತ ಮಂಡಳಿ ಸದಸ್ಯರು ಸಹಕಾರ ಸಂಘದ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ ರೈತರಿಗೆ ತೊಂದರೆ ಆಗದಂತೆ ರಸಗೊಬ್ಬರ ವಿತರಣೆ ಮಾಡುತ್ತಿದೆ. ರೈತರ ಯಾವುದೇ ಸಮಸ್ಯೆ ಇದ್ದರೂ ಧಾರಾಳವಾಗಿ ಗಮನಕ್ಕೆ ತರಬೇಕು ಎಂದರು.
ಸಂಘದ ಅಧ್ಯಕ್ಷ ಭಾಗವತ ಜಾನಬಾ ಮಾತನಾಡಿ, ಕಳೆದ ವರ್ಷ ರೈತರು ಬೆಳೆದಿರುವ ಉದ್ದು, ಹೆಸರು, ಸೋಯಾ ಸರ್ಕಾರದ ಬೆಂಬಲ ಬೆಲೆಗೆ ಖರೀದಿ ಮಾಡಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಲತಾ ಹಾರಕೂಡೆ ಮಾತನಾಡಿದರು. ಸಂಘದ ಸಿಇಒ ನಂದಕುಮಾರ ಮುಸ್ತಾಪುರೆ 2025&26ನೇ ಸಾಲಿನ ವರದಿ ವಾಚನ ಮಾಡಿದರು.
ಸಂಘದ ಉಪಾಧ್ಯಕ್ಷ ಬಸವರಾಜ ಹಾರಕುಡೆ, ನಿರ್ದೇಶಕರಾದ ಎಂಜಿ ರಾಜೋಳೆ, ಶಂಕ್ರಪ್ಪ ಪಾಟೀಲ, ಪ್ರವಿಣ ಕಾಡಾದಿ, ಬಸವರಾಜ ಚೌರೆ, ಅಶೋಕ ಮೇತ್ರೆ, ಸಂಜಯ ಪಾಟೀಲ, ಲಕ್ಷ್ಮೀಬಾಯಿ ಭಂಗ, ಜನಾಬಾಯಿ ಅಂಕುಶ ಪ್ರಮುಖರಾದ ರೂಪಾವತಿ ಜಾಧವ, ವ್ವಿಶ್ವನಾಥ ಕಾಡಾದಿ, ಶ್ರೀಮಂತರಾವ ಜಾನಾಬಾ, ಕಾಶಿನಾಥ ಕಾಡಾದಿ, ವೀರಪ್ಪ ಚೌರೆ, ಉದ್ದವ ಪಾಟೀಲ್, ಚಂದ್ರಕಾಂತ ಪಾರಶೆಟ್ಟಿ, ರಾಮರಾಜ ಪಾಟೀಲ್, ಶಿವಾಜಿ ಪಾಟೀಲ್ ಇತರರಿದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ ನಿರೂಪಣೆ ಮಾಡಿದರು. ವಿವಿಧ ಶಾಲೆಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.