ಕಮಲನಗರದ ಹಿರೇಮಠ ಶಾಖಾ ಮಠದಲ್ಲಿ ಬಸವಕಲ್ಯಾಣದಲ್ಲಿ ನಡೆಯಲಿರುವ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಭಿತ್ತಿಪತ್ರವನ್ನು ಬುಧವಾರ ಶ್ರೀ ಗುರುಬಸವ ಪಟ್ಟದ್ದೇವರು ಬಿಡುಗಡೆ ಮಾಡಿದರು. ಶ್ರೀ ಶಿವಬಸವ ಸ್ಮಾಮೀಜಿ, ರಾಜಕುಮಾರ ಬಿರಾದಾರ, ರಮೇಶ ಬಿರಾದಾರ, ಸಂತೋಷ ಟೊಣ್ಣೆ, ಗುರುಶಾಂತ ಶಿವಣಕರ, ಪ್ರಕಾಶ ಸೊಲ್ಲಾಪುರೆ, ಶಿವಶರಣಪ್ಪ ಚಿಕಮುರ್ಗೆ, ಶಾಮ ಬಿರಾದಾರ, ಅವಿನಾಶ ಶಿವಣಕರ ಇತರರಿದ್ದರು. 
ಬೀದರ್

ಅನುಭವ ಮಂಟಪ ಉತ್ಸವದಲ್ಲಿ ಪಾಲ್ಗೊಳ್ಳಿ

ಕಮಲನಗರ: ವಿಶ್ವಗುರು ಬಸವಣ್ಣನವರ ಕರ್ಮಭೂಮಿ, ಬಸವಾದಿ ಶರಣರು ನಡೆದಾಡಿದ ಪುಣ್ಯಕ್ಷೇತ್ರ ಬಸವಕಲ್ಯಾಣದಲ್ಲಿ ನ.28 ಮತ್ತು 29ರಂದು 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಡೆಯಲಿದ್ದು, ಬಸವಾಭಿಮಾನಿಗಳು ಸಹಸ್ರಾರು ಸಂಖೆ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಕರೆ ನೀಡಿದರು.

ಪಟ್ಟಣದ ಹಿರೇಮಠ ಶಾಖಾ ಮಠದಲ್ಲಿ ಬುಧವಾರ ಶರಣ ಕಮ್ಮಟ ಮತ್ತು ಅನುಭವ ಮಂಟಪದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಉತ್ಸವವು ಬಸವಾದಿ ಶರಣರ ವೈಚಾರಿಕ ಕ್ರಾಂತಿ ಸ್ಮರಿಸಿ, ಅದನ್ನು ಮುಂದುವರಿಸಿಕೊಂಡು ಹೋಗುವ ಉತ್ಸವವಾಗಿದೆ. ಕಾಯಕ, ದಾಸೋಹ, ಮಾನವೀಯತೆ, ವರ್ಣರಹಿತ, ಧರ್ಮಸಹಿತ ಸಮಾಜ ನಿಮಾರ್ಣದ ಉತ್ಸವ ಇದಾಗಿದೆ ಎಂದರು.

ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ನ ಅಧ್ಯಕ್ಷರಾದ ಮೇಲೆ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವಕ್ಕೆ ಹೊಸ ಮೆರಗು ಬಂದಿದೆ. ಪ್ರತಿವರ್ಷ ಎರಡು ದಿವಸ ಅರ್ಥಪೂರ್ಣ ಸಮಾರಂಭ ಆಯೋಜಿಸುವ ಮೂಲಕ ಬಸವಾದಿ ಶರಣರನ್ನು ಸ್ಮರಣೆ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದು ತಿಳಿಸಿದರು.

ಶ್ರೀ ಶಿವಬಸವ ಸ್ಮಾಮೀಜಿ, ರಾಜಕುಮಾರ ಬಿರಾದಾರ, ರಮೇಶ ಬಿರಾದಾರ, ಸಂತೋಷ ಟೊಣ್ಣೆ, ಗುರುಶಾಂತ ಶಿವಣಕರ, ಪ್ರಕಾಶ ಸೊಲ್ಲಾಪುರೆ, ಶಿವಶರಣಪ್ಪ ಚಿಕಮುರ್ಗೆ, ಶಾಮ ಬಿರಾದಾರ, ಅವಿನಾಶ ಶಿವಣಕರ, ಮಹಾದೇವ ಮಡಿವಾಳ, ಅಮರ ಶಿವಣಕರ, ಮಹಾದೇವ ಬಿರಾದಾರ, ಸಂಜುಕುಮಾರ ಸೊಲ್ಲಾಪುರೆ, ಸಂಗಮೇಶ ಟೊಣ್ಣೆ, ಕಲ್ಲೇಶ ಉದಗೀರೆ, ಜಗನ್ನಾಥ ಚಿಟಮೆ ಇತರರಿದ್ದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಪ್ರಾರಂಭಿಸಿರುವ ಅನುಭವ ಮಂಟಪ ಉತ್ಸವಕ್ಕೆ ದಶಕಗಳ ಐತಿಹಾಸಿಕ ಹಿನ್ನೆಲೆ ಇದೆ. 12ನೇ ಶತಮಾನದಲ್ಲೇ ವಿಶ್ವ ಮಾನವ ಸಂದೇಶ ನೀಡಿದ ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್​ ಎಂದೇ ಅನುಭವ ಮಂಟಪ ಪ್ರಸಿದ್ಧಿ ಪಡೆದಿದೆ. ಇದನ್ನು ಜಗತ್ತಿಗೆ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಮಲನಗರ ಅಲ್ಲದೇ ಸುತ್ತಲಿನ ಗ್ರಾಮದ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
> ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಭಾಲ್ಕಿ