ಕಮಲನಗರದ ತಹಸಿಲ್​ ಕಚೇರಿ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನರಿಗೆ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತಹಸೀಲ್ದಾರ್​ ಅಮಿತಕುಮಾರ್​ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ಕಸಾಪ ಅಧ್ಯಕ್ಷ ಪ್ರಶಾಂತ ಮಠಪತಿ, ರೇಖಾ ಮಹಾಜನ, ಮನೋಜ ಹಿರೇಮಠ, ಲಿಂಗಾನಂದ ಮಹಾಜನ ಇತರರಿದ್ದರು.  
ಬೀದರ್

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ

ಕಮಲನಗರ: ಕನ್ನಡ, ಕನ್ನಡತನ ಮತ್ತು ಕನ್ನಡದ ನೆಲ-ಜಲ-ಗಾಳಿಯ ರಕ್ಷಣೆ ಮತ್ತು ಏಳಿಗೆಗಾಗಿ ಕನ್ನಡಿಗರು ಬಲಿದಾನಕ್ಕೂ ಸಿದ್ಧರಾಗಬೇಕು. ನಡೆ-ನುಡಿಯಲ್ಲಿ ಕನ್ನಡ ಭೋರ್ಗರೆಯಬೇಕು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್​ಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದು ಭಾಲ್ಕಿ ಸತ್ಯನಿಕೇತನ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ರೇಖಾ ಮಹಾಜನ ಹೇಳಿದರು.

ಪಟ್ಟಣದ ತಹಸಿಲ್​ ಕಚೇರಿ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಕುರಿತು ಪ್ರೀತಿ ಮತ್ತು ಅಭಿಮಾನ ಮೂಡಿಸಿಕೊಳ್ಳದಿದ್ದರೆ, ಕನ್ನಡ ಉಳಿಸುವುದು ಕಷ್ಟ ಎಂದರು.

ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿ ಹೊಂದಿದವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಅನಿವಾರ್ಯ ಎಂಬ ಭಾವನೆಯಲ್ಲಿ ಭಾಷೆಯನ್ನು ಬೆಳೆಸಿದಾಗ ಖಂಡಿತ ಕನ್ನಡ ಉಳಿಯುತ್ತದೆ ಎಂದರು.

ತಹಸೀಲ್ದಾರ ಅಮಿತಕುಮಾರ್​ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

ತಾಪಂ ಇಒ ಹಣಮಂತರಾಯ ಕೌಟಗೆ, ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮನೋಜ ಹಿರೇಮಠ, ಪಿಡಿಒ ದಿಲೀಪ ಸಜ್ಜನ್​, ಪ್ರೊ.ಎಸ್​.ಎನ್​.ಶಿವಣಕರ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖ್ಯಗುರು ಲಿಂಗಾನಂದ ಮಹಾಜನ, ಯಶವಂತ ಬಿರಾದಾರ, ಬಸವರಾಜ ಪಾಟೀಲ್​, ಸಂತೋಷ ಸುಲಾಕೆ ಇತರರಿದ್ದರು.

ಹಣಮಂತರಾಯ ಕೌಟಗೆ ಸ್ವಾಗತಿಸಿದರು. ಪಿಆರ್​ಪಿ ಉಮಾಕಾಂತ ಮಹಾಜನ ನಿರೂಪಣೆ ಮಾಡಿದರು. ಶಾಲಾ ಮಕ್ಕಳಿಂದ ನಡೆದ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರದಲ್ಲಿ ಅವರ ಹೆಸರಿನಲ್ಲಿ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಕಾಶ ಮಾನಕರಿ, ಕೊಂಡಿಬಾ ಬಿರಾದಾರ, ನಾಗಯ್ಯ ಸ್ವಾಮಿ, ಮಹಾದೇವ ಬಿರಾದಾರ, ಪ್ರಶಾಂತ ಖಾನಾಪುರೆ, ಶಿವಾಜಿ ಆರ್​.ಎಚ್​., ಮಡಿವಾಳಪ್ಪ ಮಹಾಜನ, ಆನಂದ ಮಾಶೆಟ್ಟೆ, ಮಂಜುನಾಥ ಸ್ವಾಮಿ, ಮಹಾದೇವ ಗಾಯಕವಾಡ ಪ್ರಶಸ್ತಿ ಪುರಸತರು.