ಬಸವಕಲ್ಯಾಣದ ದೊಡ್ಡಪ್ಪ ಅಪ್ಪ ಬಿ.ಇಡಿ ಮತ್ತು ಬಿ.ಸಿ.ಎ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಡಾ.ಉಮಾದೇವಿ ಬಿ. ದೇಶಮುಖ, ಕುಲಸಚಿವರಾದ ಡಾ.ಲಕ್ಷಿ$್ಮ ಪಾಟೀಲ್ ಮಾಕಾ ಹಾಗೂ ಡಾ.ಸಂಗೀತಾ ಮಂಠಾಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಬಸವರಾಜ ಎವಲೆ, ರಾಚಯ್ಯ ಮಠಪತಿ, ಡಾ.ಶಿವಕುಮಾರ ಪಾಟೀಲ್, ವಿದ್ಯಾಧರ ಇತರರಿದ್ದರು.
- ಕಲ್ಯಾಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
- ಡಾ.ಉಮಾದೇವಿ ಬಿ. ದೇಶಮುಖ ಸಲಹೆ
ಬಸವಕಲ್ಯಾಣ: ಮಹಿಳಾ ಸಬಲೀಕರಣದೊಂದಿಗೆ ಗೌರವಯುತವಾದ ಬದುಕು, ಆರೋಗ್ಯಪೂರ್ಣ ಕುಟುಂಬ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡು ಅಭಿವೃದ್ಧಿಯ ಬದುಕಿನ ಕಡೆಗೆ ಪ್ರತಿಯೊಬ್ಬ ಮಹಿಳೆ ಸಾಗಬೇಕು ಎಂದು ಬ್ರಿಮ್ಸ್ ಆಸ್ಪತ್ರೆಯ ಖ್ಯಾತ ವೈದ್ಯೆ ಡಾ.ಉಮಾದೇವಿ ಬಿ. ದೇಶಮುಖ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಬಿ.ಇಡಿ ಮತ್ತು ಬಿ.ಸಿ.ಎ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಕೊಟ್ಟಾಗ ನಾವು ಗಳಿಸುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಅಚರಿಸಬೇಕು ಎಂದರು.
ಪ್ರತಿ ದಿನವೂ ಮಹಿಳೆಯರ ದಿನವಾಗಿದ್ದು, ಮಹಿಳಾ ದಿನಾಚರಣೆ ಸಾಧನೆ ಮಾಡಿದ ಮಹಿಳೆಯರನ್ನು ನೆನಪು ಮಾಡಿಕೊಳ್ಳುವುದು ದಿನವಾಗಿದೆ. ಹಾಗೆಯೇ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಪೋತ್ಸಾಹ ನೀಡಿ ಅವರನ್ನು ಸ್ವಾವಲಂಭಿಯನ್ನಾಗಿ ಮಾಡುವುದರ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆಂದು ತಿಳಿಸಿದರು.
ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ಲಕ್ಷಿ$್ಮ ಪಾಟೀಲ್ ಮಾಕಾ ಮಾತಾನಾಡಿ, ಮಹಿಳೆಯರು ನಕರಾತ್ಮಕ ಆಲೋಚನೆ ಮಾಡದೇ ಸಕರಾತ್ಮಕ ಚಿಂತನೆ ಮಾಡಿದಾಗ ಮಾತ್ರ ಪ್ರತಿಯೊಂದು ೇತ್ರದಲ್ಲೂ ಸಾಧನೆ ಮಾಡಬಹುದಾಗಿದೆ. ಶರಣಬಸವೇಶ್ವರ ಸಂಸ್ಥೆಯು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿಯೂ ಪ್ರತಿಯೊಂದು ೇತ್ರದಲ್ಲೂ ಸಾಧನೆ ಮಾಡಿ ಮುಂದುವರೆಯಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಡಾ.ಬಸವರಾಜ ಎವಲೆ ಮಾತನಾಡಿ, ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ದಿನವೇ ಮಹಿಳಾ ದಿನಾಚರಣೆ. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸುವ, ಗೌರವಿಸುವ ಕಾರ್ಯ ಸಮಾಜ ಮಾಡಬೇಕಾಗಿದೆ ಎಂದು ಹೇಳಿದರು.
ರಾಜೇಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಗೀತಾ ಮಂಠಾಳೆ ಮಾತಾನಾಡಿ ದರು. ಬಿಇಡಿ ಪ್ರಾಚಾರ್ಯ ರಾಚಯ್ಯ ಮಠಪತಿ ಸ್ವಾಗತಿಸಿದರು, ಲೋಕೇಶ ಮನ್ನಾಳೆ ವಂದಿಸಿದರು, ಬಸವರಾಜ ಸೇರಿ ನಿರೂಪಣೆ ಮಾಡಿದರು. ಪ್ರಾಚಾರ್ಯರಾದ ಡಾ.ಶಿವಕುಮಾರ ಪಾಟೀಲ್, ವಿದ್ಯಾಧರ, ಉಪನ್ಯಾಸಕರಾದ ನೀಲೇಶಕುಮಾರ ಟೊಂಪೆ, ಸಂಗೀತಾ ಕೊಳಾರ, ಅರುಣಾದೇವಿ ಕಾಡಾದಿ, ಕವಿತಾ ಮಠಪತಿ, ಕೈಲಾಸ ಮಂಗಲಗಿ, ಸಂಜೀವಕುಮಾರ, ರೂಪೇಶಕುಮಾರ ಭೋಸ್ಲೆ, ಮಿಥಿಲಾ ಬಿರಾದಾರ, ಸುವರ್ಣಾ ರೆಡ್ಡಿ, ಬಸವರಾಜ ಕಾಸ್ಗೆ, ಸೂರ್ಯಕಾಂತ ನಾಸೆ, ಶಾಂತಕುಮಾರ ಭೂರೆ, ಶಿಲ್ಪಾರಾಣಿ ಖಿಂಡಿಮಠ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಧನೆ ಮಾಡಿದ ಡಾ.ಉಮಾದೇವಿ ಬಿ. ದೇಶಮುಖ, ಕುಲಸಚಿವರಾದ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಹಾಗೂ ಡಾ.ಸಂಗೀತಾ ಮಂಠಾಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.