ಹುಲಸೂರಿನಲ್ಲಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಜನ್ಮದಿನದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಡಾ.ಶಿವಾನಂದ ಸ್ವಾಮೀಜಿ, ಠಾಣಾಕುಶುನೂರ ಶ್ರೀ, ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಆನಂದ ದೇವಪ್ಪ, ಬಸವರಾಜ ಧನ್ನೂರ, ಬಾಬು ವಾಲಿ, ದೀಪಾರಾಣಿ ಭೋಸ್ಲೆ, ಲತಾ ಹಾರಕೂಡೆ, ರೂಪಾವತಿ ಜಾಧವ್​ ಇತರರಿದ್ದರು. 
ಬೀದರ್

ಡಾ.ಶಿವಾನಂದ ಶ್ರೀ ಅಮೃತೋತ್ಸವ ಅರ್ಥಪೂರ್ಣ ನಡೆಸೋಣ

ಹುಲಸೂರು: ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ಶ್ರೀ ಡಾ.ಶಿವಾನಂದ ಸ್ವಾಮೀಜಿ ಅವರಿಗೆ ಯಾವುದೇ ಪ್ರಶಸ್ತಿ ನೀಡಿದರೂ ಕಡಿಮೆಯೇ. ಪೂಜ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದಲ್ಲಿ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಿ.1, 2ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಕರೆತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶ್ರೀಗಳ ಸೇವೆ ಗುರುತಿಸಿ ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಪೂಜ್ಯರಿಂದಲೇ ಹುಲಸೂರು ಮಠ ಬೆಳೆದಿದೆ. ರಾಜ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಠಗಳು ತನ್ನದೇ ಆದ ಸೇವೆ ನೀಡುತ್ತಿವೆ. ಈ ಭಾಗದಲ್ಲಿ ಸರಳ ಸ್ವಭಾವದ ಸ್ವಾಮೀಜಿ ಶಿವಾನಂದ ಶ್ರೀಗಳಾಗಿದ್ದಾರೆ ಎಂದು ಬಣ್ಣಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, ಶ್ರೀಗಳ ಅಮೃತ ಮಹೋತ್ಸವಕ್ಕೆ ಸಿಎಂ ಶಿವಕುಮಾರ್​, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ ಸೇರಿ ವಿವಿಧ ನಾಯಕರನ್ನು ಕರೆತರಲು ಪ್ರಯತ್ನಿಸುತ್ತೇನೆ. ಕಾರ್ಯಕ್ರಮದಲ್ಲಿ ಏನೇ ಜವಾಬ್ದಾರಿ ನೀಡಿದರೂ ನಿಭಾಯಿಸುವುದಾಗಿ ತಿಳಿಸಿದರು.

ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ನನ್ನ ಜನ್ಮದಿನ ಯಾವತ್ತೂ ಆಚರಿಸಿಕೊಂಡಿಲ್ಲ. ಭಕ್ತರ ಒತ್ತಾಸೆ ಮೇರೆಗೆ ಕೆಲ ವರ್ಷಗಳಿಂದ ವಚನ ತೇರು ಎಳೆಯುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವೆ. ಭಕ್ತರ ಸಹಕಾರದಿಂದ ಏನೂ ಇಲ್ಲದ ಮಠವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಹುಲಸೂರಿನ ಭಕ್ತಾದಿಗಳೇ ನನ್ನ ತಾಯಿ-&ತಂದೆ ಆಗಿದ್ದಾರೆ ಎಂದು ನುಡಿದರು.

ಜಾಗತಿಕ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಹಿರಿಯ ಪತ್ರಕರ್ತ ಬಾಬು ವಾಲಿ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ನಾಗೇಶ ಮೇತ್ರೆ, ಆಕಾಶ ಖಂಡಾಳೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಭೋಸ್ಲೆ, ಕಾರ್ಯನಿರತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ್ಣ, ಪಿಕೆಪಿಎಸ್​ ಅಧ್ಯಕ್ಷ ಭಾಗವತ ಜಾನಬಾ, ಪ್ರಮುಖರಾದ ರೂಪಾವತಿ ಜಾಧವ್​, ಸಿದ್ದರಾಮ ಕಾಮಣ್ಣ, ರಾಜೇಂದ್ರಕುಮಾರ ಗಂದಗೆ, ನೀಲಕಂಠ ರಾಠೋಡ್​, ಜ್ಞಾನೇಶ್ವರ ಮೋರೆ, ಸೋಮನಾಥಪ್ಪ ಅಸ್ಟೂರೆ, ಶಿವರಾಜ ಪಾಟೀಲ್​, ಅನಿಲಕುಮಾರ ರಗಟೆ, ಸಂಗಮೇಶ ಕುಡಂಬ್ಲೆ, ಶಶಿಕಾಂತ ದುರ್ಗೆ, ಚಂದ್ರಕಾಂತ ಬಿರಾದಾರ, ದೀಪಕ ಠಮಕೆ ಇದ್ದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಶಿವಶರಣಪ್ಪ ಮಿಠಾರೆ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಬಸವಕಲ್ಯಾಣ&ಭಾಲ್ಕಿ ರಸ್ತೆಯ ಮಹಾದ್ವಾರವನ್ನು ಸಚಿವರು ಉದ್ಘಾಟಿಸಿದರು. ಅಮೃತೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಮತ್ತು ಕಾರ್ಯಾಧ್ಯಕ್ಷರಾಗಿ ಶಾಸಕ ಶರಣು ಸಲಗರ ಅವರನ್ನು ಆಯ್ಕೆ ಮಾಡಲಾಯಿತು.