ಹುಮನಾಬಾದ್: ಹೂಗಾರ ಸಮಾಜದ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸಲಹೆ ನೀಡಿದರು.
ಹಳ್ಳಿಖೇಡ(ಬಿ)ದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ಗುರುವಾರ ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಮತ್ತು ಸಮಾಜದ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರನ್ನು ಪ್ರೀತಿಯಿಂದ ಅಪ್ಪಿಕೊಂಡು ಸೌಹಾರ್ದದಿಂದ ಬದುಕುವ ಪರಂಪರೆ ಹೂಗಾರ ಸಮಾಜ ಹೊಂದಿದೆ. ಶಿಕ್ಷಣ, ಉದ್ಯೋಗ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮುದಾಯ ಪ್ರಗತಿ ಸಾಧಿಸುತ್ತಿರುವುದು ಸಂತಸದ ಸಂಗತಿ. ಸಮುದಾಯ ಭವನ ನಿಮಾರ್ಣ ಇತರ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಮಾಜದ ರಾಜ್ಯಾಧ್ಯಕ್ಷ ಶಂಕರ ಹೂಗಾರ ಮಾತನಾಡಿ, ಹಿಂದಿನ ಸರ್ಕಾರ ಹೂಗಾರ ನಿಗಮ ಮಂಡಳಿ ಘೋಷಿಸಿದ್ದು, ಸೂಕ್ತ ಅನುದಾನ ಒದಗಿಸಲು ಸರ್ಕಾರ ಕ್ರಮ ವಹಿಸಬೇಕು. ಬೇಡಿಕೆಗಳ ಕುರಿತು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಆಶೀರ್ವಚನ ನೀಡಿದರು. ರಾಜ್ಯ ಸಹ ಕಾರ್ಯದರ್ಶಿ ದುಯೋರ್ಧನ ಹೂಗಾರ, ಉಪಾಧ್ಯಕ್ಷ ಪಡಿಯಪ್ಪ ಹೂಗಾರ, ಪ್ರಧಾನ ಕಾರ್ಯದರ್ಶಿ ಉಮೇಶ ಹೂಗಾರ, ಜಿಲ್ಲಾ ಗೌರವಾಧ್ಯಕ್ಷ ರೇವಣ್ಣಪ್ಪ ಹೂಗಾರ, ತಾಲೂಕು ಅಧ್ಯಕ್ಷ ಪ್ರವಿಣ ಹೂಗಾರ, ಪ್ರಮುಖರಾದ ಶಿವಕುಮಾರ ಹೂಗಾರ, ವಿಶ್ವನಾಥ ಹೂಗಾರ, ಅಶೋಕ ಹೂಗಾರ, ವಿಜಯಕುಮಾರ ಹೂಗಾರ, ರವಿಕಾಂತ ಹೂಗಾರ, ಮಹೇಶ ಹೂಗಾರ, ಗುರುನಾಥ ಹೂಗಾರ, ಶ್ರೀದೇವಿ ಹೂಗಾರ, ವಿಜಯಲಕ್ಷಿ$್ಮ ಹೂಗಾರ, ಸಂತೋಷ ಪಾಟೀಲ್, ಕೇಶವರಾವ ತಳಘಟಕರ್, ಮಾಂತಯ್ಯ ತೀರ್ಥ, ಮಲ್ಲಿಕಾರ್ಜುನ ಪ್ರಭಾ, ವಿಷ್ಣು ಹೂಗಾರ, ಜಗನ್ನಾಥ ಹೂಗಾರ, ಶಿವಪುತ್ರ ಇತರರಿದ್ದರು. ಸಮ್ಮೇಳನಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಹೂಗಾರ ಮಾದಯ್ಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.