ಹುಮನಾಬಾದ್: ಹೆದ್ದಾರಿ ಪಕ್ಕದ ಸೈನ್ ಬೋರ್ಡ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬ ತೀವ್ರ ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ಲಾಲಾಧರಿ ಹತ್ತಿರ ತಿರುವಿನ ಹುಮನಾಬಾದ್-ಕಲಬುರಗಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಹಳ್ಳಿಖೇಡ(ಕೆ) ವಾಡಿಯ ಸಾಯಿಕಿರಣ ಮಂಜುಕುಮಾರ ಕಲಾಪುರೆ (೨೦), ಜಗನ್ನಾಥ ರಾಜಕುಮಾರ ತಾಳಿಕೋಟೆ (೨೨) ಸ್ಥಳದಲ್ಲಿಯೇ ಮೃತಪಟ್ಟರೆ, ತೀವ್ರ ಗಾಯಗೊಂಡ ಕೃಷ್ಣ ಚಾಂಗಲೇರಿ (೨೨) ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹುಮನಾಬಾದ್‌ನಿಂದ ಹಳ್ಳಿಖೇಡ(ಕೆ) ಗ್ರಾಮದ ಕಡೆಗೆ ಬೈಕ್ ಮೇಲೆ ಮೂವರು ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಮಡೋಳಪ್ಪ, ಹುಮನಾಬಾದ್ ಸಿಪಿಐ ಸಂತೋಷ ತಟ್ಟೆಪಳ್ಳಿ, ಸಂಚಾರ ಠಾಣೆ ಪಿಎಸ್‌ಐ ಹುಲೆಪ್ಪ, ಚಟಗುಪ್ಪ ಪಿಎಸ್‌ಐ ಬಸಲಿಂಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.