ಹೈಕೋರ್ಟ್ ಸಾಂದರ್ಭಿಕ ಚಿತ್ರ
- ಹೈಕೋರ್ಟ್ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ
- ಸಚಿವ ಪ್ರಿಯಾಂಕ್ ಖರ್ಗೆಗೆ ಮುಖಭಂಗ
- ಪೊಲೀಸರ ಮೇಲೆ ದಾಳಿ ನಡೆಸಿದ್ದ ಪ್ರಕರಣ
ಕಲಬುರಗಿ: 2019 ಆ.11ರಂದು ಚಿತ್ತಾಪುರದಲ್ಲಿ ಅಕ್ರಮವಾಗಿ ಗೋ ಸಾಗಿಸುತ್ತಿದ್ದ ವಾಹನವನ್ನು ಸೀಜ್ ಮಾಡಿದ್ದ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟದ ಪ್ರಕರಣದ ಆರೋಪಿಗಳ ವಿರುದ್ಧ ಕೇಸ್ನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದ್ದಕ್ಕೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ.
2019 ಅ.11ರಂದು ಅಕ್ರಮ ಗೋ ಸಾಗಣೆ ಮಾಡುತ್ತಿದ್ದಾರೆಂದು ಪೊಲೀಸರು ವಾಹನವನ್ನು ಸೀಜ್ ಮಾಡಿದ್ದ ವೇಳೆ ಪೊಲೀಸರು, ಠಾಣೆ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಈ ಪ್ರಕರಣದಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ಪ್ರಿಯಾಂಕ್ ರ್ಖಗೆ ಮನವಿ ಮಾಡಿದ್ದರು. ಅದರಂತೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಕೈಬಿಡಲಾಗಿತ್ತು.
ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲ ಗಿರೀಶ ಭಾರದ್ವಾಜ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸಚಿನ ಶಂಕರ ಮಗದುಮ್ ಅವರಿದ್ದ ಏಕಸದಸ್ಯ ಪೀಠವೂ ವಿಚಾರಣೆ ನಡೆಸಿ, ರಾಜ್ಯ ಸರ್ಕಾರದ ತೀರ್ಮಾನಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ, ಡಿ.4ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ. ವಕೀಲ ಯಶಸ್ ಎಸ್. ದೀತ್ ವಾದಿಸಿದ್ದರು.
ಅಕ್ರಮ ಗೋ ಸಾಗಣೆ ವಾಹನ ಬಿಡುಗಡೆಗಾಗಿ ನಡೆದಿತ್ತು ಕಲ್ಲು ತೂರಾಟ
ಚಿತ್ತಾಪುರದ ಡಿಗ್ಗಾಂವ ಕ್ರಾಸ್ ಬಳಿ 2019 ಅ.11ರಂದು ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು, ಠಾಣೆಗೆ ತಂದು ಒಪ್ಪಿಸಿದ್ದರು. ಈ ವೇಳೆ ಮುಸ್ಲಿಂ ಜನಾಂಗದ ಸುಮಾರು 30 ಜನ ಠಾಣೆಗೆ ಆಗಮಿಸಿ, ಜಾನುವಾರು, ವಾಹನ ಬಿಡಬೇಕು ಎಂದು ಒತ್ತಾಯಿಸಿದ್ದರು. ವಿಚಾರಣೆ ನಡೆಸಿ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದರೂ ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿದ್ದರು. ಇದರಿಂದ ವಾಹನ ಜಖಂಗೊಂಡಿತ್ತು.
ಕಲ್ಲು ತೂರಾಟ ಮಾಡಿದ ಆರೋಪಿಗಳಾದ ಜಹೀರಮಿಯ್ಯ ಮಹಿಬೂಬ್ ಅಲಿ, ಶೇಖ್ ಾರುಕ್ ಅಬ್ದುಲ್ ಅಜೀಜ್, ಬಾಬಾ ಲಾಲ್ ಅಹ್ಮದ್, ಮಹ್ಮದ ರಿಯಾಜ್ ಜಾನಿಮಿಯ್ಯ, ಮಹ್ಮದ್ ಫಯಾಜ್ ಜಾನಿಮಿಯ್ಯ, ವಾಸಿಮ ಅಕ್ರಮ ಅಬ್ದುಲ್ ಅಜೀಜ್ಶೇಖ್, ಸೈಯದ್ ಬಶೀರ ಮಹಿಬೂಬ ಅಲಿ, ಮಹ್ಮದ್ ಅತೀಕ್ ಅಬ್ದುಲ್ ರಹೀಮ, ವಾಸಿಮ ಆಕ್ರಮ ಮಹ್ಮದ ಹುಸೇನ್ಸಾಬ, ಶೇಖ ಅಬ್ದುಲ್ ಮಾಜೀದ ಅಬ್ದುಲ್ ಹಮೀದ್ ಅವರನ್ನು ಪೋಲಿಸರು ಬಂಧಿಸಿದ್ದರು. ಈ ಟನೆಯಿಂದ ಚಿತ್ತಾಪುರದಲ್ಲಿ ಕೆಲ ದಿನಗಳವರೆಗೆ ಕೋಮುಗಲಭೆ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಪಥಸಂಚಲನ ನಡೆಸಿ, ಬಿಗಿ ಬಂದೋಬಸ್ತ್ ಸಹ ಏರ್ಪಡಿಸಿದ್ದರು.
ಸಚಿವ ರ್ಖಗೆ ಮನವಿ ಮಾಡಿದ್ದರು
ಪೊಲೀಸರು, ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಮುಸ್ಲಿಂ ಜನಾಂಗದವರ ಮೇಲೆ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ರ್ಖಗೆ ಮನವಿ ಮಾಡಿದ್ದರು. ಈ ಕುರಿತು 2025ರ ಆ.8ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಪ್ರಕರಣವನ್ನು ಹಿಂಪಡೆಯಲು ರ್ನಿಣಯಿಸಲಾಗಿತ್ತು. ಇದರ ವಿರುದ್ಧ ವಕೀಲ ಗಿರೀಶ ಭಾರದ್ವಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
ಸರ್ಕಾರ ಗಲಭೆಕೋರರ ರಕ್ಷಣೆಗೆ ನಿಂತ್ತಂತೆ ಕಾಣಿಸುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಎಂದು ಹುಬ್ಬಳ್ಳಿ, ಚಿತ್ತಾಪುರದ ಗಲಭೆಕೋರರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಪೊಲೀಸರ ಮೇಲೆ ದಾಳಿ ಪ್ರಕರಣಗಳನ್ನು ಹಿಂಪಡೆಯುವುದು ಆರಕ್ಷಕರ ಮನೋಬಲ ಕುಗ್ಗಿಸುತ್ತದೆ. ರಾಜಕೀಯ ಕಾರಣಕ್ಕೆ ಕಾನೂನು ಗಾಳಿಗೆ ತೂರಿ, ರಾಜ್ಯ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ದಾಳಿಕೋರರ ಪ್ರಕರಣ ವಾಪಸ್ ಪಡೆಯುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಎಲ್ಲಿ ಅಡಗಿತ್ತು ತಿಳಿಸಲಿ. ಸಂವಿಧಾನದ ಪಾಠ ಹೇಳುವವರಿಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಸಂವಿಧಾನ ಬಾಹಿರ ಎಂಬಂತೆ ಕಾಣಿಸುತ್ತಿಲ್ಲವೇ?