ಜಿಲ್ಲೆಯಲ್ಲೇ ಗುಡಪಳ್ಳಿ ಗ್ರಾಪಂ ಮಾತ್ರ ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಹಿಂದಿನ ಪಿಡಿಒ ಸಂತೋಷ ಪಾಟೀಲ್ ಉತ್ತಮ ಸೇವೆ ಮಾಡಿದ್ದರ ಫಲವಾಗಿ ಇದೀಗ ಗ್ರಾಪಂ ಅಭಿವೃದ್ಧಿಗೆ 8 ಲಕ್ಷ ರೂ. ಅನುದಾನ ಲಭಿಸಲಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ. ಉತ್ತಮ ಕೆಲಸ ಮಾಡಿ ಜಿಲ್ಲೆಯ ಗ್ರಾಪಂಗಳು ಪುರಸ್ಕಾರಗಳಿಗೆ ಭಾಜನರಾಗಬೇಕು.
| ಡಾ.ಗಿರೀಶ್ ಬದೋಲೆಜಿಪಂ ಸಿಇಒ
ಗುಡಪಳ್ಳಿ ಪಂಚಾಯಿತಿಗೆ ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದ್ದರಿಂದ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಅನುಕೂಲವಾಗಲಿದೆ. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಶ್ರಮವೂ ಇದರಲ್ಲಿದೆ. ಎಲ್ಲರೂ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ತಾಜಾ ಉದಾಹರಣೆ ಗುಡಪಳ್ಳಿ ಗ್ರಾಪಂ.
| ಸಂತೋಷ್ ಪಾಟೀಲ್ಹಿಂದಿನ ಪಿಡಿಒ, ಗುಡಪಳ್ಳಿ ಗ್ರಾಪ