ಚಿಟಗುಪ್ಪ ತಾಲೂಕಿನ ಮುದನಾಳ ಗ್ರಾಮದಲ್ಲಿ ಉಚಿತ ಆಯುಷ್​ ಆರೋಗ್ಯ ತಪಾಸಣಾ ಶಿಬಿರವನ್ನು ಟಿಎಚ್​ಒ ಡಾ.ಶಿವಕುಮಾರ ಸಿದ್ದೇಶ್ವರ ಉದ್ಘಾಟಿಸಿದರು. ಶ್ರೀ ಮುರುಗೇಂದ್ರ ಸ್ವಾಮಿ, ಡಾ.ಕುತೇಜ್​ ಬೇಗಂ, ಡಾ.ಅಶೋಕಕುಮಾರ ನಾಗೂರೆ ಇತರರಿದ್ದರು. 
ಬೀದರ್

ಸಮತೋಲನ ಆಹಾರದಿಂದ ಆರೋಗ್ಯ ಭಾಗ್ಯ

ಚಿಟಗುಪ್ಪ: ಪ್ರತಿಯೊಬ್ಬರೂ ಸಮತೋಲನ ಹಾಗೂ ಸಾತ್ವಿಕ ಆಹಾರ ಸೇವಿಸುವುದರ ಜತೆಗೆ ದೈಹಿಕ ಶ್ರಮಕ್ಕೆ ಆದ್ಯತೆ ನೀಡಿದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ ಹೇಳಿದರು.

ತಾಲೂಕಿನ ಮುದನಾಳ ಗ್ರಾಮದ ಶ್ರೀ 108 ಮುರುಗೇಂದ್ರೇಶ್ವರ ಹಿರೇಮಠ ಸಂಸ್ಥಾನದಲ್ಲಿ 35ನೇ ಅನುಷ್ಠಾನ ಮಹಾ ಮಂಗಲೋತ್ಸವದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಉಚಿತ ಆಯುಷ್​ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸ್ಥಳಿಯವಾಗಿ ದೊರೆಯುವ ನುಚ್ಚು, ಮಜ್ಜಿಗೆ, ಜೋಳದ ರೊಟ್ಟಿ ಸೇರಿ ಹಿರಿಯರು ಸೇವಿಸುತ್ತಿದ್ದ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು. ಇದರೊಂದಿಗೆ ದೈಹಿಕ ಶ್ರಮದ ಬದುಕು ರೂಢಿಸಿಕೊಂಡರೆ ಹಲವು ರೋಗಗಳಿಂದ ದೂರವಿದ್ದು ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದು ತಿಳಿಸಿದರು.

ಬೀದರ್​ ಜಿಲ್ಲಾ ಆಯುಷ್​ ಅಧಿಕಾರಿ ಡಾ.ಕುತೇಜ್​ ಬೇಗಂ ಮಾತನಾಡಿ, ಮುದನಾಳದ ಶ್ರೀಮಠ ಗ್ರಾಮೀಣ ಭಾಗದ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಇತರ ಮಠಗಳಿಗೆ ಮಾದರಿಯಾಗಿದೆ ಎಂದರು.

ಖ್ಯಾತ ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗೂರೆ ಮಾತನಾಡಿ, ಚರ್ಮರೋಗದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಶೀಘ್ರ ಗುಣಮುಖರಾಗಬಹುದು ಎಂದು ತಿಳಿಸಿದರು.

ಮಠದ ಪೀಠಾಧಿಪತಿ ಶ್ರೀ ಮುರುಗೇಂದ್ರ ಸ್ವಾಮಿ ನೇತೃತ್ವ ವಹಿಸಿದ್ದರು. ವೀರಶೆಟ್ಟಿ ಮಾನಕರ, ರಾಜು ಪಾಟೀಲ, ಸತ್ತಾರ ಮಿಯ್ಯ, ಸುರೇಶ ಉಡಬಾಳ, ಗುರುನಾಥ ಕಲ್ಲೂರ, ಗುಂಡುಸಿಂಗ್​ ಕೊಡಂಬಲ ಇದ್ದರು. ಪರಿಸರವಾದಿ ಶೈಲೇಂದ್ರ ಕಾವಡಿ ಪ್ರಾಸ್ತಾವಿಕ ಮಾತನಾಡಿದರು. ವೀರಶೆಟ್ಟಿ ಹಳ್ಳಿ ಸ್ವಾಗತಿಸಿದರು. ಯೋಗ ಶಿಕ್ಷಕ ಮಹೇಶ ಕೊಲಿ ವಂದಿಸಿದರು. ಬಳಿಕ ಆಯುಷ್​ ಮತ್ತು ಯುನಾನಿ ಔಷಧಗಳನ್ನು ವಿತರಿಸಲಾಯಿತು. ಪಾರಂಪರಿಕ ವೈದ್ಯ ಚಂದ್ರಶೇಖರ ಪಂಡಿತ (ಬೆಂಗಳೂರು) ಅವರಿಗೆ ವೈದ್ಯರತ್ನ ಪ್ರಶಸ್ತಿ ಹಾಗೂ ಸಿದ್ರಾಮ ಪೂಜಾರಿ ಮತ್ತು ಸಚಿನ್​ ಭಂಜತ್ರಿ ಅವರಿಗೆ ಯುವ ವೈದ್ಯರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.