ಭಾಲ್ಕಿಯಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಗೃಹ ಸಚಿವರಿಗೆ ಬರೆದ ಮನವಿಪತ್ರವನ್ನು ತಹಸಿಲ್ ಕಚೇರಿಗೆ ಸಲ್ಲಿಸಲಾಯಿತು. ರಮೇಶ ಚಿದ್ರಿ, ಗಣೇಶ ಪಾಟೀಲ್, ಬಸವರಾಜ ಕಾರಬಾರಿ ಇತರರಿದ್ದರು. 
ಬೀದರ್

ಹಂಜ್ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಿ

ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ

ಭಾಲ್ಕಿ: ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಬೇಖು ಎಂದು ಜಿಲ್ಲಾ ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.

ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಸಮಸಮಾಜ ನಿರ್ಮಾಣದ ಕನಸು ಹೊಂದಿದ್ದ ಬಸವಣ್ಣವರ ವಿರುದ್ಧ ಅವಹೇಳನಕಾರಿ ವಿಷಯ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸುದ್ದಿ ಪಸರಿಸಿದ ರವಿ ಹಂಜ್ ಅವರನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರವಿ ಹಂಜ್ ಹಾಗೂ ಇದರ ಹಿಂದೆ ಪಿತೂರಿ ಮಾಡಿರುವ ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮವಹಿಸಿ. ನಿರ್ಲಕ್ಷ್ಯ ಮಾಡಿದರೆ ಹೋ

ರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು. ಬೇಡಿಕೆ ಸಂಬಂಧ ಗೃಹ ಸಚಿವರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಲಾಯಿತು.

ಸೇನೆಯ ಜಿಲ್ಲಾ ಗೌರವಾಧ್ಯಕ್ಷ ರಮೇಶ ಚಿದ್ರಿ, ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್, ಜಗದೀಶ ಪಾಟೀಲ್, ಬಸವರಾಜ ಕಾರಬಾರಿ, ಕಾಶಿನಾಥ ಚಳಕಾಪುರೆ, ಸಂಗಮೇಶ ಮಾರ್ಗೆ, ವೀರಶೆಟ್ಟಿ ಉಚ್ಚೆಕರ್ ಇತರರಿದ್ದರು.