ಬಸವಕಲ್ಯಾಣ ತಾಲೂಕಿನ ಕವಡಿಯಾಳದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣೆ ದಾನಮ್ಮದೇವಿ ಉತ್ಸವ ಹಾಗೂ 15ನೇ ಶರಣೆ ದಾನಮ್ಮ ಜ್ಯೋತಿ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂಜ್ಯ ಪ್ರಭುಶ್ರೀ ಮಾತಾ, ದಿಲೀಪ ಶಿಂಧೆ, ಬಸವರಾಜ ಹೊನ್ನಾ, ಗಿರಿಜಾ ಸಿದ್ದಣ್ಣ, ಸ್ನೇಹಾ ಗೋಕಾಕ್, ಅಶ್ವಿನಿ ಚಡಚಣ, ವಿಜಯಲಕ್ಷ್ಮೀ ಚಂಗನಾಳೆ, ಶ್ರೀದೇವಿ ಅಂತಪ್ಪನವರ ಇತರರಿದ್ದರು.
- ಶ್ರೀ ಬಸವಪ್ರಭು ಸ್ವಾಮೀಜಿ ನುಡಿ
- ಕವಡಿಯಾಳದಲ್ಲಿ 15ನೇ ಜ್ಯೋತಿ ಯಾತ್ರೆ ಸಮಾರೋಪ
ಬಸವಕಲ್ಯಾಣ: ಗುಣತೀರ್ಥವಾಡಿ ಸಮೀಪದ ಶರಣೆ ದಾನಮ್ಮ ದೇವಿ ತಪೋಭೂಮಿ ಅಭಿವೃದ್ಧಿಪಡಿಸಬೇಕು. ಇಲ್ಲಿ ಇಷ್ಟಲಿಂಗ ಯೋಗ ಕೇಂದ್ರ ಪ್ರಾರಂಭಿಸಬೇಕು ಎನ್ನುವ ಸಂಕಲ್ಪ ಮಾಡಲಾಗಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಕವಡಿಯಾಳದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಚಾರಿಟೇಬಲ್ ಟ್ರಸ್ಟ್ನಿಂದ ಭಾನುವಾರ ಸಂಜೆ ಆಯೋಜಿಸಿದ್ದ ಶರಣೆ ದಾನಮ್ಮದೇವಿ ಉತ್ಸವ, 4ನೇ ಶರಣ ಸಮಾಗಮದ, 15ನೇ ಶರಣೆ ದಾನಮ್ಮ ಜ್ಯೋತಿ ಯಾತ್ರೆ ಸಮಾರೋಪ ಹಾಗೂ ಗುರು ವಂದನೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಉದ್ದೇಶಿತ ಯೋಜನೆ, ಕೆಲಸ-ಕಾರ್ಯಗಳನ್ನು ಯಶಸ್ವಿಗೊಳಿಸಲು ಪೂರಕವಾಗಿ ಮೂರು ಸಾವಿರ ಜನರನ್ನು ಟ್ರಸ್ಟ್ನ ಸಹ ಸದಸ್ಯರನ್ನಾಗಿ ಮಾಡಿಕೊಳ್ಳಲು ಯೋಚಿಸಲಾಗಿದೆ ಎಂದರು.
ಟ್ರಸ್ಟ್ ಕಾರ್ಯಾಧ್ಯಕ್ಷ ದಿಲೀಪ ಶಿಂಧೆ ಮಾತನಾಡಿ, ಪೂಜ್ಯ ಬಸವಪ್ರಭು ಸ್ವಾಮೀಜಿ ಅವರು ಗುಣತೀರ್ಥವಾಡಿ ಸಮೀಪದ ಶರಣೆ ದಾನಮ್ಮ ದೇವಿಯ ಪವಿತ್ರ ೇತ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರೂ ಸಹಕರಿಸಿ ಕೈಜೋಡಿಸಬೇಕಿದೆ ಎಂದರು.
ಸಮ್ಮುಖ ವಹಿಸಿದ್ದ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಕಲಬುರಗಿಯ ಪೂಜ್ಯ ಪ್ರಭುಶ್ರೀ ಮಾತಾಜಿ, ಬೀದರ್ನ ಸತ್ಯಾದೇವಿ ಮಾತಾಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಬಸವರಾಜ ವೆಂಕಟಾಪುರ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ, ಉದ್ಯಮಿ ಸೋಮನಾಥ ಅಷ್ಟೂರೆ, ಪ್ರದಿಪ ಬಿರಾದಾರ್, ಲಕ್ಷ$್ಮಣರಾವ್ ಹಂದಿಕೇರಿ, ನಾಗಶೆಟ್ಟಿ ಪಾಟೀಲ, ಮನೋಹರರಾವ ಮೇಧಾ, ಶೌರ್ಯ ಜವಾದಿ, ನಾಗೇಶ್, ಬಸವಜ್ಯೋತಿ, ಸುಮಿತ್ರಾದೇವಿ ಇದ್ದರು. ಲಕ್ಷ್ಮೀ ಹಾಗೂ ಸೂರ್ಯಕಾಂತ ಬಿರಾದಾರ್ ಸಂಗಡಿಗರಿಂದ ವಚನ ಸಂಗೀತ ನೆರವೇರಿತು. ಪ್ರಗತಿಪರ ರೈತರಿಗೆ ವೀಲಾಸರಾವ್ ರೈತ ಧರ್ಮರತ್ನ ಪ್ರಶಸ್ತಿ , ಗಿರಿಜಾ ಸಿದ್ದಣ್ಣ ಹಂಗರಗಿ, ಶಿವಬಸಯ್ಯ ಸ್ವಾಮಿ ಕೊಪ್ಪಳ ಅವರಿಗೆ ಗೃಹಸ್ಥ ಜಂಗಮ ಪ್ರಶಸ್ತಿ ಹಾಗೂ ಲಿಂಗಾನುಭಾವಿ ರತ್ನ ಪ್ರಶಸ್ತಿಯನ್ನು ಜಯಪ್ರಕಾಶ ಸದಾನಂದೆ ಅವರಿಗೆ ಪ್ರದಾನ ಮಾಡಲಾಯಿತು.