ಎಂ.ಜಿ. ದೇಶಪಾಂಡೆ 
ಬೀದರ್

ದೇಶಪಾಂಡೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಕಲಾಭೂಮಿ ಪ್ರತಿಷ್ಠಾನ ವತಿಯಿಂದ ಪ್ರಶಸ್ತಿ

ಬೀದರ್: ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಹಿರಿಯ ಸಾಹಿತಿ ಡಾ.ಎಂ.ಜಿ. ದೇಶಪಾಂಡೆ ಅವರಿಗೆ ಕಲಾಭೂಮಿ ಪ್ರತಿಷ್ಠಾನ ವತಿಯಿಂದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದೇಶಪಾಂಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ಮಾಪಕ ಭಾ.ಮಾ. ಹರೀಶ್, ನಟ ಗಣೇಶರಾವ್ ಕೇಸರ್ಕರ್, ನಿರ್ದೇಶಕ ಸಾಯಿ ರಾಮ್, ನಟಿ ಚೈತ್ರ ಕೊಟೂರು, ಆಸ್ಕರ್ ಕೃಷ್ಣ, ಬಿ.ಸಿ. ವೆಂಕಟೇಶಮೂರ್ತಿ, ಡಾ.ಸಿರಿಗೆರೆ ತಿಪ್ಪೇಶ, ಶ್ರೀಧರ ಕುಪ್ಪೂರ್, ಭಾಸ್ಕರರಾವ ಇತರರಿದ್ದರು.