ಹುಮನಾಬಾದನ್​ಲ್ಲಿ ಮಂಗಳವಾರ ಸಿಸಿ ರಸ್ತೆ ನಿರ್ಮಿಸುವಂತೆ ವಾಂಜರಿ ಬಡಾವಣೆಯ ನಿವಾಸಿಗಳು ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. 
ಬೀದರ್

ವಾಂಜರಿ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಿಸಿ

ಹುಮನಾಬಾದ್​: ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಹದಗೆಟ್ಟಿರುವ ರಸ್ತೆಯಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಗ್ನಿಶಾಮಕ ಕಚೇರಿ ಕ್ರಾಸ್​ನಿಂದ ನಾಗರಾಜ ಅವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಎನ್​ಎಸ್​ಯುಐ ಘಟಕದ ಪ್ರಧಾನ ಕಾರ್ಯದರ್ಶಿ ಯೇಸುದಾಸ ಕಟ್ಟಿಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಯೇಸುದಾಸ ಕಟ್ಟಿಮನಿ ಮಾತನಾಡಿ, ವಾಂಜರಿ ಬಡಾವಣೆಯ ಅಗ್ನಿಶಾಮಕ ಕಚೇರಿ ಸಮೀಪದ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ್​ ಮಾತನಾಡಿ, ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಸಿಸಿ ರಸ್ತೆ ನಿಮಾರ್ಣ ಸೇರಿದಂತೆ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಮುಖರಾದ ಉಮೇಶ ಆಕಾರ, ಅರ್ಜುನ್​ ಆಕಾರ, ಆಕಾಶ ವಜನದಾರ್​, ಮಹೇಶ ಕಟ್ಟಿಮನಿ, ವಿಕಾಶ ಕೌಳಸಕರ್​, ಅಭಿಫಿೇಕ ರತ್ನಡಗಿ, ಅಂಕುಶ ವಜನದಾರ್​, ಆನಂದರೆಡ್ಡಿ, ಅರುಣ ಚಟ್ನಳ್ಳಿಕರ್​, ಅಮನ ಕಿಣ್ಣಿಕರ್​, ಜಡಸನ್​ ಕಟ್ಟಿಮನಿ ಇತರರಿದ್ದರು.

ತಾಂಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಪಟ್ಟಣದ ಸೇವಾ ನಗರ ತಾಂಡಾ ನಿವಾಸಿಗಳು ಕುಡಿಯುವ ನೀರು ಪೂರೈಸುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮಂಗಳವಾರವ ಮನವಿ ಸಲ್ಲಿಸಿದರು. ತಾಂಡಾ ನಿವಾಸಿ ರಾಜು ರಾಠೋಡ್​ ಮಾತನಾಡಿ, ತಾಂಡಾಕ್ಕೆ ಸೂಕ್ತ ಸಮಯಕ್ಕೆ ಕುಡಿಯುವ ನೀರು ಪೂರೈಕೆಯಾಗದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೂ ಶಾಲೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಸೇವಾ ನಗರ ತಾಂಡಾಕ್ಕೆ ಸಮರ್ಪಕ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು. ವಿಲಾಶ ಜಾಧವ, ಬಾಬುರಾವ ಜಾಧವ ಇತರರಿದ್ದರು.ಸೇವಾ ನಗರ ತಾಂಡಾದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಲ್ಲಿನ ನಿವಾಸಿಗಳ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹುಮನಾಬಾದ್​ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಸಿಸಿ ರಸ್ತೆ ನಿಮಾರ್ಣ ಸೇರಿದಂತೆ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು ಎಂದು ಮಾಜಿ ಸಚಿವ -ರಾಜಶೇಖರ ಪಾಟೀಲ್​ ಭರವಸೆ ನೀಡಿದರು.