ವಿಶೇಷ ಪ್ರೋತ್ಸಾಹಧನ ನೀಡಲು ರಾಜ್ಯ ಸಚಿವ ಸಂಪುಟ ಸಮ್ಮತಿಸಿದ ಕಾರಣ ಇಲ್ಲಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಡುವಿನ ನಾಗರಿಕ ವಿಮಾನಯಾನ ಸೇವೆ ಮತ್ತೆ ಆರಂಭವಾಗಲಿದೆ.
ಬೀದರ್ ನಿಂದ ನಾಗರಿಕ ವಿಮಾನಯಾನ ಸೇವೆಗೆ ಆರಂಭದಿಂದಲೂ ವಿಘ್ನಗಳು ಕಾಡುತ್ತಿವೆ. ವಿವಿಧ ಕಾರಣಗಳಿಂದ ಮೂರು ಬಾರಿ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ವಾಪಸ್ ಪಡೆದಿದ್ದರಿಂದ ರದ್ದಾಗಿದ್ದ ವಿಮಾನಯಾನ ಸೇವೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ವಿಶೇಷ ಕಾಳಜಿಯಿಂದ ಹಾರಾಟ ಶುರು ಮಾಡಲು ಸಿದ್ಧತೆ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಸಬ್ಸಿಡಿ ಹಿಂಪಡೆಯುವ ನಿರ್ಧಾರದಿಂದ ವಿಮಾನಯಾನ ಸೇವೆ ಕಳೆದ ವರ್ಷ ಸ್ಥಗಿತಗೊಂಡಿತು. ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ಹಣ ಭರಿಸಿ ವಾಯುಯಾನ ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ. ಸ್ಟಾರ್ ಏರ್‌ಲೈನ್ ಸಂಸ್ಥೆಯೊAದಿಗೆ (೨೦೨೫ರ ಏ.೧೫ರಿಂದ ೨೦೨೬ರ ಏ.೧೪) ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಏ.೧೫ರಿಂದ ಸೇವೆ ಸ್ಥಗಿತಗೊಳಿಸಿತು. ಸ್ಟಾರ್ ಏರ್‌ಲೈನ್ ಕಳೆದ ವರ್ಷಕ್ಕಿಂತ ಹೆಚ್ಚು ಅಂದರೆ ೨೨ ಕೋಟಿ ರೂ.ಗೆ ಪಟ್ಟು ಹಿಡಿದಿತ್ತು. ಅಧಿಕಾರಿಗಳ ಜತೆ ಜಿಲ್ಲಾಡಳಿತ ಸತತ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದು ಫಲ ನೀಡಿದೆ. ಮುಂದಿನ ಒಂದು ವರ್ಷದ ಅವಽಗೆ ವಿಮಾನಯಾನ ಪುನರಾರಂಭಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 14.25 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಇದಕ್ಕೆ ಸ್ಟಾರ್ ಏರ್‌ಲೈನ್ಸ್ ಸಹ ಸಮ್ಮತಿ ಸೂಚಿಸಿದೆ.
ಪ್ರವಾಸೋದ್ಯಮ ಸೇರಿ ಹಿಂದುಳಿದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ 2020ರ ಫೆ.೭ರಂದು ಮೊದಲ ಬಾರಿಗೆ ವಿಮಾನಯಾನ ಸೇವೆ ಆರಂಭಿಸಲಾಯಿತು. ೧೬ ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ನಿರ್ಮಿಸಿ ಉಡಾನ್ ಯೋಜನೆಯಡಿ ಜಿಲ್ಲೆ ಜನರಿಗೆ ವಿಮಾನ ಸೇವೆ ನೀಡಲಾಗಿತ್ತು. ಹೈದರಾಬಾದ್ ವಿಮಾನ ನಿಲ್ದಾಣ ನಿರ್ವಹಣೆ ಸಂಸ್ಥೆಯಾದ ಜಿಎಂಆರ್ ಜತೆ ಜಿಲ್ಲ್ಲಾಡಳಿತ ಈ ನಿಲ್ದಾಣದ ನಿರ್ವಹಣೆ ಒಪ್ಪಂದ ಮಾಡಿಕೊಂಡು ಬೀದರ್-ಬೆಂಗಳೂರು ನಡುವೆ ಟ್ರೂಜೆಟ್ ಸಂಸ್ಥೆ ೭೨ ಆಸನದ ವಿಮಾನ ಸೇವೆ ನೀಡಲಾರಂಭಿಸಿತು. ಒಪ್ಪಂದದAತೆ ಮೂರು ವರ್ಷ ಕಾರ್ಯಾಚರಣೆ ಪೂರ್ಣಗೊಳ್ಳುವ ಮೊದಲೇ ಟ್ರೂಜೆಟ್ ಸಂಸ್ಥೆ ಆರ್ಥಿಕ ದಿವಾಳಿ ಮತ್ತು ವಿಮಾನ ಲಭ್ಯವಿಲ್ಲದ ಕಾರಣ ನೀಡಿ 2021ರ ನ.2ರಂದು ಸೇವೆ ಸ್ಥಗಿತಗೊಳಿಸಿತು.
ನಂತರ ಸ್ಟಾರ್ ಏರ್‌ಲೈನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡು 2022ರ ಜು.15ರಂದು ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ ಈ ಸಂಸ್ಥೆ 2023ರ ಡಿ.26ರಂದು ಸಂಚಾರ ನಿಲ್ಲಿಸಿತು. ವಿಮಾನಯಾನ ಸೇವೆ ಮತ್ತೆ ಆರಂಭಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ ವಿಶೇಷ ಆಸಕ್ತಿ ವಹಿಸಿ 2025ರ ಏಪ್ರಿಲ್‌ನಲ್ಲಿ ಮತ್ತೆ ಸೇವೆ ಆರಂಭವಾಗುವಂತೆ ಮಾಡಿದರು. ಒಪ್ಪಂದ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡು ವಾರದಿಂದ ಸೇವೆ ಸ್ಥಗಿತಗೊಂಡಿದ್ದರೂ ಪುನಃ ಸಂಚಾರ ಸೇವೆ ಕನಸು ಚಿಗುರೊಡೆದಿದೆ. ಮತ್ತೆ ಏರ್‌ಲೈನ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸೇವೆ ಆರಂಭವಾಗಲಿದೆ.
"
ಬೀದರ್-ಬೆಂಗಳೂರು ನಡುವೆ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆ ಆರಂಭಿಸಲು ಸಚಿವ ಸಂಪುಟ ಸಭೆ ಸಮ್ಮತಿಸಿದ್ದು, ಕೆಕೆಆರ್‌ಡಿಬಿಯಿಂದ ಅನುದಾನ ಮೀಸಲಿಡಲಾಗಿದೆ. ಸ್ಟಾರ್ ಏರ್‌ಲೈನ್ ಸಂಸ್ಥೆ ಅಧಿಕಾರಿಗಳ ಜತೆ ಜಿಲ್ಲಾಡಳಿತ ನಿರಂತರ ಸಂಪರ್ಕ ಸಾಧಿಸಿದ್ದು, ಶೀಘ್ರದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.
| ಈಶ್ವರ ಖಂಡ್ರೆಜಿಲ್ಲಾ ಉಸ್ತುವಾರಿ ಸಚಿವ