ಬೀದರ್‍ನ ನೌಬಾದ್‍ನ ಲುಂಬಿಣಿ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಸಾಮ್ರಾಟ್ ಅಶೋಕ್ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕಾರಂಜಾ ಎಂ.ಎಸ್.ಡಬ್ಲ್ಯೂ. ಪಿ.ಜಿ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. 
ಬೀದರ್

ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಸಾಮ್ರಾಟ್ ಅಶೋಕ್ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕಾರಂಜಾ ಎಂ.ಎಸ್.ಡಬ್ಲ್ಯೂ ಪಿ.ಜಿ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಇಲ್ಲಿಯ ನೌಬಾದ್‍ನ ಲುಂಬಿಣಿ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸಾಧನೆಗೆ ಪ್ರಯತ್ನಿಸಬೇಕು ಎಂದು ಉದ್ಘಾಟನೆ ನೆರವೇರಿಸಿದ ಡಿಸಿಸಿ ಬ್ಯಾಂಕ್‍ನ ನೌಬಾದ್ ಶಾಖೆ ವ್ಯವಸ್ಥಾಪಕ ಬಿ. ಶಿವಪ್ರಸಾದ್ ಹೇಳಿದರು.
ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ನಾತಕ ಹಾಗೂ ಸ್ನಾತಕೋತ್ತರ ಶಿಕ್ಷಣ ನೀಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಎಸ್. ಮೇಲ್ಕೇರಿ ತಿಳಿಸಿದರು.
ವಿದ್ಯಾ ವಿಕಾಸ ಎಂ.ಎಸ್.ಡಬ್ಲ್ಯೂ ಕಾಲೇಜು ಪಾಚಾರ್ಯ ಲಕ್ಷ್ಮಣ ಮಂಜಾಳಕರ್, ಗೋವಿಂದರಾವ್ ಮುಳೆ ಕಾಲೇಜ್ ಆಫ್ ಎಜುಕೇಷನ್ ಪ್ರಾಚಾರ್ಯ ವಿಜಯಕುಮಾರ ವಾಘಮಾರೆ, ಕಾರಂಜಾ ಎಂ.ಎಸ್.ಡಬ್ಲ್ಯೂ ಪಿಜಿ ಕಾಲೇಜು ಪ್ರಾಚಾರ್ಯ ಮೋಹನಂದ ಕೋಹಿನೂರ್, ಸಂಪನ್ಮೂಲ ವ್ಯಕ್ತಿ ಶುಕ್ರೂದ್ದಿನ್, ಸಾಮ್ರಾಟ್ ಅಶೋಕ್ ಪದವಿ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಫುಲೆ ಮತ್ತಿತರರು ಇದ್ದರು.
ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆದವು.