ಬೀದರ್‍ನ ಪಾಪನಾಶ ದೇಗುಲ ಸಮೀಪದ ರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ನೂತನ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು. 
ಬೀದರ್

ಯಶ್ ಅಭಿಮಾನಿಗಳ ಸಂಘಕ್ಕೆ ಆಯ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ಜಿಲ್ಲಾ ಹಾಗೂ ಬೀದರ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಕೊಡ್ಡೆ ತಿಳಿಸಿದ್ದಾರೆ.

ಜಿಲ್ಲಾ ಘಟಕದ ಪದಾಧಿಕಾರಿಗಳು: ಆಕಾಶ್ ಪಾಟೀಲ (ಕಾರ್ಯದರ್ಶಿ).

ಬೀದರ್ ತಾಲ್ಲೂಕು ಘಟಕ: ನಾಗೇಶ್ ರಾಯ್ (ಪ್ರಧಾನ ಕಾರ್ಯದರ್ಶಿ), ಅಂಬರೀಷ್ (ಕಾರ್ಯದರ್ಶಿ), ವೀರೇಶ್ ಭಂಡಾರಿ(ಆಯೋಜನಾ ಕಾರ್ಯದರ್ಶಿ), ರಾಹುಲ್ (ಖಜಾಂಚಿ) ಹಾಗೂ ರಾಕಿ ಸೂರ್ಯವಂಶಿ (ಸಂಚಾಲಕ).

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಕೊಡ್ಡೆ ಅವರು ನಗರದ ಪಾಪನಾಶ ದೇಗುಲ ಸಮೀಪದ ರಾಮ ಮಂದಿರದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಉಪಾಧ್ಯಕ್ಷ ಶಿವ ಮಡಿವಾಳ, ಉಸ್ತುವಾರಿ ವೀರೇಶ್, ರಾಕೇಶ್ ಟಿಡಿಪಿ, ಗುಂಡು ಮತ್ತಿತರರು ಇದ್ದರು.