ಬೀದರ್‍ನಲ್ಲಿ ಶಾಸಕ ರಹೀಂಖಾನ್ ಅವರು ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸಲಕರಣೆಗಳನ್ನು ವಿತರಿಸಿದರು. 
ಬೀದರ್

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಸಲಕರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ಕ್ಷೇತ್ರದ ಗಂಗಾ ಕಲ್ಯಾಣ ಯೋಜನೆಯ 16 ಫಲಾನುಭವಿಗಳಿಗೆ ಶಾಸಕ ರಹೀಂಖಾನ್ ಅವರು ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸಲಕರಣೆಗಳನ್ನು ವಿತರಿಸಿದರು.
ಹಮಿಲಾಪುರದ ಮೊಹಮ್ಮದಿ ಬೇಗಂ, ಸೈಯದ್ ನಯೀಮುದ್ದೀನ್, ಸೈಯದ್ ಹಸನುದ್ದೀನ್, ಕಂಗಟಿಯ ಮಕ್ಬುಲ್‍ಮಿಯಾ, ರಾಜನಾಳದ ಷರೀಫುದ್ದೀನ್, ಅಲಿಯಂಬರ್‍ನ ಮೊಹಮ್ಮದ್ ಸಾಬ್, ಹಾಜಿಸಾಬ್, ಬಾವಾಪುರದ ಮೆಹರೋಜ್ ಫಾತಿಮಾ, ಜನವಾಡದ ಬರಕತ್‍ಖಾನ್, ಚಾಂಬೋಳದ ಗೌಸ್ ಖಾನ್, ನಂದಗಾಂವ್‍ನ ಅಬ್ದುಲ್ ವಹೀದ್, ಮೊಹಮ್ಮದ್ ಮುಕೀಮ್, ಮರಕಲ್‍ನ ರಶೀದ್ ಮಿಯಾ, ಕನ್ನಳ್ಳಿಯ ಇಸ್ಮಾಯಿಲ್‍ಸಾಬ್, ಗುಮ್ತಾಪುರದ ಸಿದ್ದಿಕಾ ಬೇಗಂ ಹಾಗೂ ಬಂಪಳ್ಳಿಯ ಹೈದರ್ ಷಾ ಅವರಿಗೆ ಪಂಪ್‍ಸೆಟ್, ಪೈಪ್‍ಲೈನ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟರ್ ಬಾಕ್ಸ್ ವಿತರಣೆ ಮಾಡಿದರು.
ರೈತರಿಗೆ ನೀರಾವರಿ ಸೌಲಭ್ಯಕ್ಕೆ ಗಂಗಾ ಕಲ್ಯಾಣ ಯೋಜನೆ ಸಹಕಾರಿಯಾಗಿದೆ. ನೀರಾವರಿ ಸೌಲಭ್ಯದಿಂದ ಕೃಷಿ ಉತ್ಪಾದನೆ ಹೆಚ್ಚಲಿದ್ದು, ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ರಹೀಂಖಾನ್ ಹೇಳಿದರು.
ಕ್ಷೇತ್ರದ ರೈತರು ಸೇರಿದಂತೆ ಸರ್ವರ ಕಲ್ಯಾಣವೇ ನನ್ನ ಧ್ಯೇಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಸಲಾವುದ್ದಿನ್, ಮುಖಂಡರಾದ ಬಸವರಾಜ ಬುಯ್ಯಾ, ಪರಮೇಶ್ ಬಂಪಳ್ಳಿ, ಸಿದ್ದಿಕ್ ಮರಕಲ್, ಇಬ್ರಾಹಿಂ ಕಂಗಟಿ, ರಿತೇಶ್ ಅಲಿಯಂಬರ್ ಮತ್ತಿತರರು ಇದ್ದರು.