ಬೀದರ್‍ನಲ್ಲಿ ಜೈ ಕರುನಾಡು ವೇದಿಕೆಯ ನೂತನ ಪದಾಧಿಕಾರಿಗಳಿಗೆ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ಆರ್.ಕೆ. ನೇಮಕಾತಿ ಪತ್ರ ವಿತರಿಸಿದರು 
ಬೀದರ್

ಜೈ ಕರುನಾಡು ವೇದಿಕೆ ಪದಾಧಿಕಾರಿಗಳ ಆಯ್ಕೆ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಜೈ ಕರುನಾಡು ವೇದಿಕೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ಆರ್.ಕೆ. ತಿಳಿಸಿದ್ದಾರೆ.
ಪದಾಧಿಕಾರಿಗಳ ಹೆಸರು ಹೀಗಿವೆ.
ಜಿಲ್ಲಾ ಘಟಕ: ಸುರೇಶ ಮಮದಾಪುರಕರ್, ನಾಗೇಶ ಸ್ವಾಮಿ ಮಸ್ಕಲ್, ಶಿವಾಜಿ ರಾಠೋಡ್ (ಉಪಾಧ್ಯಕ್ಷರು), ಡಾ. ಶಿವಕುಮಾರ ಭೈರನಳ್ಳಿ (ಪ್ರಧಾನ ಕಾರ್ಯದರ್ಶಿ), ಆಕಾಶ ಮಡಿವಾಳ (ಕಾರ್ಯದರ್ಶಿ), ರಾಜಶೇಖರ ಉತ್ಕರ್, ನಾಗೇಶ ಈಡಗಾರ್ (ಸಹ ಕಾರ್ಯದರ್ಶಿ), ಸಂತೋಷ್ ರಾಠೋಡ್, ನರಸಿಂಗ್ ಕೋಳಿ, ಶಮಶು ಉಲ್ ಹಕ್ (ಸಂಘಟನಾ ಕಾರ್ಯದರ್ಶಿ), ಅರ್ಜುನ (ಜಂಟಿ ಕಾರ್ಯದರ್ಶಿ).
ಬೀದರ್ ದಕ್ಷಿಣ ಘಟಕ: ಪ್ರಭು ಕೆ.ಬಿ. ಭೈರನಳ್ಳಿಕರ್ (ಅಧ್ಯಕ್ಷ).
ಔರಾದ್ ತಾಲ್ಲೂಕು ಘಟಕ: ಮಧುಕರ ಬೇಂದ್ರೆ (ಅಧ್ಯಕ್ಷ).
ನೂತನ ಪದಾಧಿಕಾರಿಗಳು ಕನ್ನಡ ನೆಲ, ಜಲ, ಭಾಷೆ, ಸಂಸ್ಕøತಿ, ರೈತರು ಹಾಗೂ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಗೋಪಾಲ್ ಆರ್.ಕೆ. ಸೂಚಿಸಿದ್ದಾರೆ.