ವಿಜಯಕುಮಾರ ಪಾಟೀಲ ಯರನಳ್ಳಿ 
ಬೀದರ್

ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ವಿಜಯಕುಮಾರ ಪಾಟೀಲ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಕನ್ನಡ ಸಾಹಿತ್ಯ ಪರಿಷತ್‍ನ ಬೀದರ್ ಉತ್ತರ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ಕನ್ನಿಕಾ ಪರಮೇಶ್ವರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಪಾಟೀಲ ಯರನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‍ನ ಬೀದರ್ ಉತ್ತರ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಈ ಆಯ್ಕೆ ಜರುಗಿತು.
ವಿಜಯಕುಮಾರ ಪಾಟೀಲ ಅವರು 22 ವರ್ಷಗಳಿಂದ ಶೈಕ್ಷಣಿಕ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಪರಿಷತ್‍ನ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ್ ಬಿರಾದಾರ ತಿಳಿಸಿದರು.
ಸಮ್ಮೇಳನ ಆಗಸ್ಟ್ 8 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಲಕ್ಷ್ಮಣ ಪೂಜಾರಿ, ಸಂತೋಷ್ ಮಂಗಳೂರೆ, ಬಳಿರಾಮ ಕುರನಾಳೆ, ಸಂತೋಷ್ ಸೋಲಪುರೆ, ಸಂಗಮೇಶ ನೇಳಗೆ, ಬಸವರಾಜ ಬಿರಾದಾರ, ನರಸಾರೆಡ್ಡಿ ಮತ್ತಿತರರು ಇದ್ದರು.