ಸಚಿನ್ ಮಠಪತಿ 
ಬೀದರ್

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಮಠಪತಿ

ರೇವಣಸಿದ್ದಪ್ಪ ಪಾಟೀಲ್
ಬೀದರ್:
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ಸಚಿನ್ ಮಠಪತಿ ಹುಮನಾಬಾದ್ ನೇಮಕಗೊಂಡಿದ್ದಾರೆ.
ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿದ್ದ ಪ್ರೊ. ಶಿವಕುಮಾರ ಕಟ್ಟೆ ಅವರಿಗೆ ಬೆಂಗಳೂರಿಗೆ ವರ್ಗವಾದ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸಚಿನ್ ಮಠಪತಿ ಅವರನ್ನು ನೇಮಕ ಮಾಡಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಮಠಪತಿ ಎರಡು ದಶಕದಿಂದ ಧಾರ್ಮಿಕ, ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಪರಿಷತ್‍ನ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾಲ್ಲೂಕಿನಲ್ಲಿ 50 ವರ್ಷಗಳಲ್ಲಿ 8 ತಾಲ್ಲೂಕು ಸಮ್ಮೇಳನಗಳು ಜರುಗಿದ್ದು, ಅದರಲ್ಲಿ 4 ತಾಲ್ಲೂಕು ಸಮ್ಮೇಳನ ಹಾಗೂ ವಲಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹಿರಿಮೆ ಮಠಪತಿ ಅವರದ್ದಾಗಿದೆ ಎಂದು ಚನಶೆಟ್ಟಿ ತಿಳಿಸಿದ್ದಾರೆ.