ಬಿ.ಆರ್.ಪಾಟೀಲ್ ಪೆನಾಲ್ಗೆ ರ‍್ಜರಿ ಜಯ
ಕಲಬುರಗಿ: ತೀವ್ರ ಕುತೂಹಲ ಮೂಡಿಸಿದ್ದ, ವಿವಾದಕ್ಕೆ ಕಾರಣವಾಗಿದ್ದ ಭೂಸನೂರದ ಆಳಂದ ಸಹಕಾರಿ ಸಕ್ಕರೆ ಕರ‍್ಖಾನೆಯ ಆಡಳಿತ ಮಂಡಳಿ ಚುನಾವಣೆಯೂ ಬುಧವಾರ ಬಿಗಿ ಭದ್ರತೆ ಮಧ್ಯೆ ಸುಸೂತ್ರವಾಗಿ ನಡೆದಿದ್ದು, ಶಾಸಕ ಬಿ.ಆರ್.ಪಾಟೀಲ್ ನೇತೃತ್ವದ ರೈತ ಮಿತ್ರ ಪೆನಾಲ್ ೧೪ರಲ್ಲಿ ೧೩ ಸ್ಥಾನಗಳಲ್ಲಿ ರ‍್ಜರಿ ಗೆಲುವು ಸಾಧಿಸಿ, ಮೆಲುಗೈ ಪಡೆದಿದ್ದು, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ನಗರದ ಕೃಷಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯ ೧೪ ಸದಸ್ಯರ ಸ್ಥಾನಕ್ಕೆ ೪೨ ಜನರ ಸ್ರ‍್ಧಿಸಿದ್ದರು. ಬೆಳಗ್ಗೆ ೯ರಿಂದ ಸಂಜೆ ೪ಗಂಟೆವರೆಗೆ ಮತದಾನ ಸುಸೂತ್ರವಾಗಿ ನಡೆಯಿತು. ನಂತರ ಮತ ಎಣಿಕೆ ನಡೆದು, ತಡರಾತ್ರಿಯಲ್ಲಿ ಲಿತಾಂಶ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ತಹಸೀಲ್ದಾರ್ ಅಣ್ಣಾರಾಯ ಪಾಟೀಲ್ ಕರ‍್ಯನರ‍್ವಹಿಸಿದ್ದರು.
ತೀವ್ರ ತುರುಸಿನ ಸ್ರ‍್ಧೆ, ರಾಜಕೀಯ ಪ್ರತಿಷ್ಠೆ ಹಿನ್ನೆಲೆಯಲ್ಲಿ ಇಡೀ ಚುನಾವಣೆ ಕೇಂದ್ರವೂ ರಾಜಕೀಯ ರಣರಂಗವಾಗಿ ಮರ‍್ಪಟ್ಟಿತ್ತು. ಶಾಸಕ ಬಿ.ಆರ್.ಪಾಟೀಲ್ ಮತ್ತು ಮಾಜಿ ಶಾಸಕ ಸುಭಾಷ ಗುತ್ತೇದಾರ್ಗೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯೂ ಯಾವುದೇ ಶಾಸಕ, ಸಂಸದ ಚುನಾವಣೆಗೂ ಮೀರಿಸಿ, ಅಭ್ರ‍್ಥಿಗಳು, ಮುಖಂಡರು ಪೈಪೋಟಿಗೆ ಇಳಿದಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ ರ‍್ಪಡಿಸಲಾಗಿತ್ತು. ಎಲ್ಲೆಡೆ ಪೊಲೀಸ್ ನಿಗಾ ಇಡಲಾಗಿತ್ತು. ಶಾಸಕರಾದ ಬಿ.ಆರ್.ಪಾಟೀಲ್, ಎಂ.ವೈ.ಪಾಟೀಲ್ ಸೇರಿ ಕರ‍್ಖಾನೆಯ ಮತದಾರರು ರ‍್ಜರಿಯಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಬೆಂಬಲಿಗರು, ರೈತ ಮಿತ್ರ ಪೆನಾಲ್ನವರು ಕೆಎಂಎ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ರ‍್ಜರಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಗುಲಾಲ್ ಎರಚಿಸಿ, ಸಿಹಿ ತಿನಿಸಿ, ಸಂಭ್ರಮಿಸಿದರು.
ಗೆಲುವು ಸಾಧಿಸಿದವರು
ಅ ವರ್ಗದ ಕಬ್ಬು ಬೆಳೆಗಾರರ ಸಾಮಾನ್ಯ ಕ್ಷೇತ್ರ: ಗುರುಲಿಂಗ ಜಂಗಮ ಮಾಲಿ ಪಾಟೀಲ್ ದಂಗಾಪುರ (೫೭೬), ಚನ್ನಬಸಪ್ಪ ಮಾಲಿ ಪಾಟೀಲ್ ದಣ್ಣೂರ (೪೯೩), ರ‍್ಮರಾಜ ಸಾಹು ಭುಸನೂರ (೫೩೮), ಶಾಂತೇಶ್ವರ ಪಾಟೀಲ್ ಹೊದಲೂರ (೩೨೦), ಶ್ರೀಶೈಲ ಹತ್ತರಕಿ ಆಳಂದ (೪೬೯), ಸುಭಾಷ ಮುರುಡ ಬೆಳಮಗಿ (೪೧೫) ಗೆಲುವು ಸಾಧಿಸಿದರು.
ಪರಿಶಿಷ್ಟ ಜಾತಿ ಕ್ಷೇತ್ರ: ಸಿದ್ದರಾಮಪ್ಪ ಸಾಲಿಮನಿ ಹಸರಗುಂಡಗಿ (೪೯೭). ಪರಿಶಿಷ್ಟ ಪಂಗಡ: ಸಾತಪ್ಪ ತಳವಾರ ಭೂಸನೂರ (೪೮೯). ಸಾಮಾನ್ಯ ಮಹಿಳೆ: ಕವಿತಾ ಗೊಬ್ಬುರ ಭುಸನೂರ (೫೨೨), ರತ್ನಾಬಾಯಿ ಮಾಲಿ ಪಾಟೀಲ್ ಭೂಸನೂರ (೪೯೯). ಹಿಂದುಳಿದ ರ‍್ಗ ಬಿ: ಗುರುಪ್ರಸಾದ ಪಾಟೀಲ್ ಕೊರಳ್ಳಿ (೫೬೧). ಕಬ್ಬು ಬೆಳೆಗಾರರು ಅಲ್ಲದ ಕ್ಷೇತ್ರ: ಮಾಣಿಕ ಮಾಡ್ಯಾಳ ಸರಸಂಬಾ (೯೭). ಸಹಕಾರಿ ಸಂ ಸಂಸ್ಥೆಗಳ ಕ್ಷೇತ್ರ: ಸಿದ್ದಮ್ಮ ಎಚ್. ಮೈನಾಳ (೨೫) ಗೆಲುವು ಸಾಧಿಸಿದ್ದು, ಎಲ್ಲರೂ ಕಾಂಗ್ರೆಸ್ ಬೆಂಬಲಿತ ರೈತ ಮಿತ್ರ ಪೆನಾಲ್ನವರಾಗಿದ್ದಾರೆ. ಹಿಂದುಳಿದ ರ‍್ಗ ಎ: ಅಶೋಕ ಗುತ್ತೇದಾರ್ (೪೪೪) ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ಪೆನಾಲ್ನವರಾಗಿದ್ದಾರೆ.