ಪ್ರಭು ಚವ್ಹಾಣ್ 
ಬೀದರ್

ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸುವೆ

ರೇವಣಸಿದ್ದಪ್ಪ ಪಾಟೀಲ್
ಔರಾದ್: ಶಾಸಕ ಪ್ರಭು ಚವ್ಹಾಣ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೆಂಬೆಳ್ಳಿ ಗ್ರಾಮದ ವಿಜಯಶ್ರೀ ವೈಜಿನಾಥ ಮೇತ್ರೆ ಅವರ ಆರೋಗ್ಯವನ್ನು ವಿಚಾರಿಸಿದರು.
ಪೂರ್ವನಿಗದಿತ ಕಾರ್ಯಕ್ರಮದ ನಿಮಿತ್ತ ಆಂಧ್ರಪ್ರದೇಶಕ್ಕೆ ತೆರಳಿರುವ ಶಾಸಕರು, ಆಸ್ಪತ್ರೆಯಲ್ಲಿರುವ ಬಾಲಕಿಯ ಪಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯದ ಕುರಿತು ಮಾಹಿತಿ ಪಡೆದರು. ಬಳಿಕ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿ, ಮಗುವಿನ ಆರೋಗ್ಯ ಸ್ಥಿತಿಗತಿ ಮತ್ತು ಚಿಕಿತ್ಸೆಯ ವಿವರಗಳನ್ನು ಪಡೆದರು. ನನ್ನ ಕ್ಷೇತ್ರದ ಬಾಲಕಿಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ನೀಡಿ ಶೀಘ್ರ ಗುಣಮುಖವಾಗಿಸಬೇಕೆಂದು ಸೂಚಿಸಿದರು.
ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟು, ಒಬ್ಬರು ಆಸ್ಪತ್ರೆಯಲ್ಲಿರುವ ಘಟನೆ ತೀವ್ರ ಆಘಾತ ಉಂಟುಮಾಡಿದೆ. ಇವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅತ್ಯಂತ ದುರ್ಬಲವಾಗಿದ್ದು, ಅವರಿಗೆ ಹೇಳಿಕೊಳ್ಳುವಂತಹ ಕೃಷಿ ಭೂಮಿಯೂ ಇಲ್ಲ. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಇಂತಹ ಬಡ ಕುಟುಂಬಕ್ಕೆ ಒಂದೇ ವೇಳೆ ಇಷ್ಟೊಂದು ದುಃಖ ಮತ್ತು ಸಂಕಷ್ಟ ಎದುರಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಶ್ರೀ ಅವರ ಚಿಕಿತ್ಸಾ ವೆಚ್ಚವನ್ನು ತಾವು ಭರಿಸುವುದಾಗಿ ಭರವಸೆ ನೀಡಿದ ಶಾಸಕರು, ವೈಯಕ್ತಿಕವಾಗಿ ಅಗತ್ಯ ಸಹಾಯ-ಸಹಕಾರ ನೀಡುತ್ತೇನೆ. ಮಕ್ಕಳ ಮುಂದಿನ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸುತ್ತೇನೆ. ಅಲ್ಲದೆ ಸರ್ಕಾರದ ವತಿಯಿಂದಲೂ ಸೂಕ್ತ ನೆರವು ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮಾವಿನ ಹಣ್ಣು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬAಧಪಟ್ಟ ಅಽಕಾರಿಗಳಿಗೆ ಸೂಚಿಸಲಾಗಿದೆ. ಸತ್ಯಾಂಶ ಹೊರಬರಲು ಸರ್ಕಾರದ ಮೇಲೆಯೂ ಒತ್ತಡ ಹೇರುವುದಾಗಿ ಶಾಸಕ ಚವ್ಹಾಣ ತಿಳಿಸಿದ್ದಾರೆ.