ಹುಮನಾಬಾದ್: ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರದ ಭೂಮಿ ಮಂಜೂರು ಮಾಡುವಂತೆ ಸ್ಥಳಿಯ ಶ್ರೀ ಮಾಣಿಕಪ್ರಭು ವಾಯು ವಿಹಾರ ಸೇವಾ ಸಂಘ ಒತ್ತಾಯಿಸಿದೆ.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಬುಧವಾರ ಸಂಘದ ಅಧ್ಯಕ್ಷ ಸುರೇಶ ಸೀಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಜಗನ್ನಾಥ ಚೌರ ಅವರಿಗೆ ಸಲ್ಲಿಸಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ ಹೊಲಿಗೆ ತರಬೇತಿ, ಕ್ರೀಡಾ ಚಟವಟಿಕೆ ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ತಾಲೂಕಿನಲ್ಲಿ 5 ಎಕರೆ ಸರ್ಕಾರಿ ಅಥವಾ ಗೋಮಾಳ ಜಮೀನು ಮಂಜೂರು ಮಾಡಿಕೊಡುವಂತೆ ಕೋರಿದ್ದಾರೆ.
ಸಂಘದ ಉಪಾಧ್ಯಕ್ಷ ವೈಜಿನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶ್ರೀನಾಥ ದೇವಣಿ, ಪ್ರಮುಖರಾದ ಭೀಮೇಶ ಪಂಚಾಳ, ಶ್ರೀಕಾಂತ ಕುಲಕರ್ಣಿ, ಮಲ್ಲಿಕಾರ್ಜುನ ರೋಗನ, ಸುಭಾಷ ಪಾಟೀಲ್, ಸುಭಾಷ ರಡ್ಡಿ, ಸಿದ್ದು ಸ್ವಾಮಿ, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ ಮಠಪತಿ, ಬಸವರಾಜ ಮಚಕುರಿ, ಅವಿನಾಶ ಪೊಲದಾಸ, ಅಣ್ಣೆಪ್ಪ ಸಿಂಧನಕೇರಾ ಇತರರಿದ್ದರು.