ಹುಲಸೂರಿನ ಸುಗ್ರೆ ಪೆಟ್ರೋಲ್ ಬಂಕ್ನಲ್ಲಿ ರೈತರು ಡೀಸೆಲ್ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವುದು.ಕಾಣಬಹುದು.
ಹುಲಸೂರು: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ಅಭಾವ ತಲೆದೋರಿರುವ ಕಾರಣ ಬಿತ್ತನೆ ಸಮಯದಲ್ಲೆ ಇಂಧನ ಸಿಗದೆ ರೈತರು ಬಂಕ್ಗಳ ಮುಂದೆ ಕಾದು ಪರದಾಡುವಂತಾಗಿದೆ. ಕೃಷಿ ಚಟುವಟಿಕೆಗೆ ಬಳಸುವ ಟ್ರಾಕ್ಟರ್, ಟಂಟಂಗಳಿಗೆ ಸಮರ್ಪಕ ಡೀಸೆಲ್ ಸಿಗದೆ ಸಮಸ್ಯೆ ಉಂಟಾಗಿದ್ದು, ಬುಧವಾರ ಪಟ್ಟಣದ ಸುಗರೆ ಪೆಟ್ರೋಲ್ ಬಂಕ್ ಬಳಿ ರೈತರು ಸರದಿ ಸಾಲಿನಲ್ಲಿ ನಿಂತು ಡೀಸೆಲ್ ಸಿಗದೇ ಮರಳುತ್ತಿರುವುದು ಸಾಮಾನ್ಯವಾಗಿತ್ತು. ಸರ್ಕಾರ ಯಾವುದೇ ಪೆಟ್ರೋಲ್ ಬಂಕ್ನವರು ಕ್ಯಾನ್ಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಮಾರಾಟ ಮಾಡಬಾರದು ಎಂಬ ನಿಯಮ ಜಾರಿಗೆ ತಂದಿದ್ದರಿಂದ ಒಂದು ಟ್ರಾಕ್ಟರಿಗೆ ಕೇವಲ 2000 ರೂ. ಡೀಸೆಲ್ ನೀಡುತ್ತಿದ್ದರಿಂದ ಹೊಲದಲ್ಲಿ ಕೆಲಸ ಮಾಡುವ ಟ್ರಾಕ್ಟರ್ ಮತ್ತೆ ಪೆಟ್ರೋಲ್ ಬಂಕ್ಗೆ ಬರಬೇಕಾದರೆ ದುಬಾರಿ ಹಣ ಖರ್ಚಾಗುತ್ತಿವೆ ಎಂಬ ಉದ್ದೇಶದಿಂದ ಬಹುತೇಕ ಟ್ರಾಕ್ಟರ್ ಮಾಲೀಕರು ಕೃಷಿ ಚಟುವಟಿಕೆ ಸ್ಥಗಿತ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ರೈತ ಪ್ರಮುಖರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಆದಷ್ಟು ಬೇಗನೆ ರೈತರಿಗೆ ಡೀಸೆೆಲ್ ಸಿಗುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.