ಚಿಟಗುಪ್ಪ ತಾಲೂಕಿನ ಬೋರಾಳದಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಶನಿವಾರ ಪಿಯು ಡಿಡಿ ಡಾ.ಚಂದ್ರಕಾಂತ ಗಂಗಶೆಟ್ಟಿ ಪ್ರಮಾಣ ಪತ್ರ ಹಾಗೂ ಮೆಡಲ್​ ನೀಡಿ ಸನ್ಮಾನಿಸಿದರು. ಡಾ.ಕಿರಣ್​ ಪಾಂಡುರಂಗ, ಓಂಪ್ರಕಾಶ ಧಡ್ಡೆ, ಲಿಂಗರಾಜ ಎಸ್​., ಶಶಿಕುಮಾರ ಅಕ್ಕಿ, ಪ್ರೇಮಕುಮಾರ, ರಾವೇಂದ್ರ ಕಿರಣ ಇತರರಿದ್ದರು. 
ಬೀದರ್

ವಿವಿಧ ಜಿಲ್ಲೆಗಳ 9 ಕ್ರೀಡಾಪಟುಗಳ ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಿಟಗುಪ್ಪ: ಬೋರಾಳ ಗ್ರಾಮದ ಎಸ್​.ಆರ್​. ಕಾಲೇಜು ಕ್ಯಾಂಪಸ್​ನಲ್ಲಿ ಶಾಲಾ ಶಿಣ ಇಲಾಖೆ (ಪದವಿಪೂರ್ವ) ಬೆಂಗಳೂರು, ಉಪ ನಿರ್ದೇಶಕರ ಕಚೇರಿ ಬೀದರ್​ ಸಹಯೋಗದಡಿ ಆಯೋಜಿಸಿದ್ದ 2026&27ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಎರಡು ದಿನದ ಶನಿವಾರ ರಾಜ್ಯಮಟ್ಟದ ಯೋಗಾಸನದ ಅಂತಿಮ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಯ 9 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯದ 38ಶೈಕ್ಷಣಿಕ ಜಿಲ್ಲೆಗಳ ಸುಮಾರು 400 ಕ್ರೀಡಾಪಟುಗಳು ಭಾಗವಹಿಸಿದ್ದರು.

ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ್​ ವಿ.ಜಿ., ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಮೈಸೂರು ಜಿಲ್ಲೆಯ ರಜತ್​ ಗಿರಿ, ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಉತ್ಸವ್​ ಎಸ್​. ಮತ್ತು ಗೌತಮ್​ ಜಲ್ಲೆ ಎಸ್​.ಡಿ, ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವಾಸ್ತರಾಜ್​ ಮತ್ತು ಪೃಥ್ವಿಚಾರ್​ ಆಯ್ಕೆಯಾಗಿದ್ದಾರೆ.

ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ಹಾಗೂ ಕಲಾತ್ಮಕ ಯೋಗಾಸನ ವೈಯಕ್ತಿಕ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಸೃಷ್ಟಿ ಕೆ.ವೈ., ಕಲಾತ್ಮಕ ಯೋಗಾಸನ ಜೋಡಿ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನನ್ಯಾ ಸುಧಾಕರ್​ ಗುರು ಮತ್ತು ಪೂರ್ವಿಕಾ ಜೆ.ಎಂ. ಆಯ್ಕೆಯಾಗಿದ್ದಾರೆ.

ಅಂತಿಮ ಫಲಿತಾಂಶ: ಬಾಲಕರ ವಿಭಾಗ: ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. ಪ್ರಥಮ, ಮೈಸೂರು ಜಿಲ್ಲೆಯ ರಜತ್​ ಗಿರಿ ದ್ವೀತಿಯ ಹಾಗೂ ಶಿವಮೊಗ್ಗ ಜಿಲ್ಲೆಯ ಉತ್ಸವ್​ ಎಸ್​. ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. ಪ್ರಥಮ, ಮೈಸೂರು ಜಿಲ್ಲೆಯ ರಜತ್​ ಗಿರಿ ದ್ವೀತಿಯ ಹಾಗೂ ಬಳ್ಳಾರಿ ಜಿಲ್ಲೆಯ ಗಿರಿರಾಜ ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಉತ್ಸವ್​ ಎಸ್​. ಮತ್ತು ಗೌತಮ್​ ಜಲ್ಲೆ ಪ್ರಥಮ, ಬೆಂಗಳೂರು ಕೇಂದ್ರ ಜಿಲ್ಲೆಯ ಜೀವನ್​ ಎ. ಮತ್ತು ಪ್ರೀತಮ್​ ಶೇಖರ್​ ಎಸ್​. ದ್ವೀತಿಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಕ್ಷಯ ಗಣೇಶ ಭಟ್​ ಮತ್ತು ಸಂಜಯ್​ ಜಗದೀಶ ನಾಯಕ್​ ತೃತೀಯ ಸ್ಥಾನ. ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವತ್ಸರಾಜ್​ ಮತ್ತು ಪೃಥ್ವಿಚಾರ್​ ಪ್ರಥಮ, ಶಿವಮೊಗ್ಗ ಜಿಲ್ಲೆಯ ಉತ್ಸವ್​ ಎಸ್​. ಮತ್ತು ಸುದರ್ಶನ್​ ಎಂ. ದ್ವೀತಿಯ ಹಾಗೂ ಧಾರವಾಡ ಜಿಲ್ಲೆಯ ಪ್ರೀತಮ್​ ಜಿ. ಸುರಂಗಿ ಮತ್ತು ಉಮೇಶ್​ ಎಚ್​. ದೊಡಮನಿ ತೃತೀಯ ಸ್ಥಾನ ಗಳಿಸಿದ್ದಾರೆ.

ಬಾಲಕೀಯರ ವಿಭಾಗ : ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಸೃಷ್ಟಿ ಕೆ.ವೈ. ದಾವಣಗೆರೆ ಜಿಲ್ಲೆ ಪ್ರಥಮ, ಜಯಲಕ್ಷಿ$್ಮ ಜಿ.ಕೆ. ಹಾವೇರಿ ಜಿಲ್ಲೆ ದ್ವೀತಿಯ, ಬೃಂದಾ ಎ.ಆರ್​. ಬೆಂಗಳೂರು ಉತ್ತರ ಜಿಲ್ಲೆ ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಸೃಷ್ಟಿ ಕೆ.ವೈ ದಾವಣಗೆರೆ ಜಿಲ್ಲೆ ಪ್ರಥಮ ಸ್ಥಾನ, ಸಂಪದಾ ಸತೀಶ್​ ಹೆಗಡೆ ಉತ್ತರ ಕನ್ನಡ ಜಿಲ್ಲೆ ದ್ವೀತಿಯ ಸ್ಥಾನ, ಎಚ್​.ಅಭಿಜ್ಞಾ ದಕ್ಷಿಣ ಕನ್ನಡ ಜಿಲ್ಲೆ ತೃತೀಯ ಸ್ಥಾನ.

ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್​ ಗುರುವ್​ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಷಾ ಎಂ. ಮತ್ತು ದಿವ್ಯಾ ಎಂ.ಎ. ಮೈಸೂರು ಜಿಲ್ಲೆ ದ್ವೀತಿಯ ಸ್ಥಾನ, ಬಿಂದುಶ್ರೀ ಎಚ್​. ಮತ್ತು ವರ್ಷಾ ಆರ್​. ಬೆಂಗಳೂರು ಗ್ರಾಮಾಂತರ ಜಿಲ್ಲೆ ತೃತೀಯ ಸ್ಥಾನ ಪಡೆದಿದ್ದಾರೆ.

ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್​ ಗುರುವ್​ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಬಿಂದುಶ್ರೀ ಎನ್​.ಸಿ. ಮತ್ತು ನೇಸರಾ ಎ.ಎಸ್​. ಮಂಡ್ಯ ಜಿಲ್ಲೆ ದ್ವೀತಿಯ ಸ್ಥಾನ, ರತ್ನಾ ಶ್ಯಾಗೋಟಿ ಮತ್ತು ಜ್ಯೋತಿ ಇಂಗಳಗಿ ಧಾರವಾಡ ಜಿಲ್ಲೆ ತೃತೀಯ ಸ್ಥಾನ ಪಡೆದಿದ್ದಾರೆ.