ಜಿಲ್ಲೆ

ಸಿನಿಮಾ ಮಾದರಿಯಲ್ಲಿ ಜೈಲು ಗೋಡೆ ಪರಾರಿಯಾದ ಮನೆಗಳ್ಳ: ಬೀದರ್​ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೀದರ್: ಕಾರಾಗೃಹದಿಂದ ಸಿನಿಮಾ ಮಾದರಿಯಲ್ಲಿ ಕೈದಿಯೊಬ್ಬ ಪರಾರಿಯಾಗಿದ್ದಾನೆ.

ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ರಾಘವೇಂದ್ರ ಜೋತಪ್ಪನವರ (22) ಎಂಬಾತ ಜೈಲಿನಿಂದ ಪರಾರಿಗಾಗಿರುವಾತ.

ಭಾನುವಾರ ಸಂಜೆ ಹೊತ್ತನಲ್ಲಿ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಜೈಲಿನ ಗೋಡೆಯಿಂದ ಹಾರಿ ಪರಾರಿಯಾಗಿದ್ದಾನೆ. ಕಳ್ಳತನ ಪ್ರಕರಣದ ಆರೋಪದಲ್ಲಿ ರಾಘವೇಂದ್ರ ಜನವರಿ 11ರಿಂದ ಇಲ್ಲಿನ ಜೈಲಿನಲ್ಲಿದ್ದ.

ಕಳ್ಳತನ ಮಾಡುವುದೇ ಈತ ಉದ್ಯೋಗವನ್ನಾಗಿಸಿಕೊಂಡಿದ್ದ. ಮೂರು ಕಳ್ಳತನ ಪ್ರಕರಣಲ್ಲಿ ಜೈಲು ಪಾಲಾದ ಈತ, ಹೊಂಚು ಹಾಕಿ ಜೈಲಿನ ಮೂಲೆಯೊಂದರಲ್ಲಿ ಗೋಡೆ ಹಾರಿ ಪರಾರಿಯಾಗಿದ್ದಾನೆ.

ಈ ಕುರಿತು ನ್ಯೂಟೌನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.