ಜಿಲ್ಲೆ

ನಾರ್ವೆಯಿಂದ ಬೀದರ್​​ಗೆ ಆಗಮಿಸಿದ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಶಂಕೆ: ಪುಣೆ ಪ್ರಯೋಗಾಲಯಕ್ಕೆ ರಕ್ತದ ಮಾದರಿ

kumarvrl

ಬೀದರ್: ನಾರ್ವೆಯಿಂದ ನಗರಕ್ಕೆ ಆಗಮಿಸಿರುವ ವ್ಯಕ್ತಿಯೊಬ್ಬರು ಕೊರೊನಾ ವೈರಸ್​ ಸೊಂಕು ಹರಡಿರುವ ಶಂಕೆಯ ಹಿನ್ನೆಲೆಯಲ್ಲಿ ಬ್ರಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾರ್ವೆ ರಾಷ್ಟ್ರದಿಂದ 15 ದಿನಗಳ ಹಿಂದೆ ಬೀದರ್​ಗೆ ಆಗಮಿಸಿದ್ದ ಇವರಿಗೆ ಜ್ವರ, ನೆಗಡಿ, ಕೆಮ್ಮು ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯ ರೋಗ ಲಕ್ಷಣಗಳ ಬಗ್ಗೆ ಮೇಲಾಧಿಕಾರಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಶಂಕಿತ ವ್ಯಕ್ತಿಯ ರಕ್ತ ಹಾಗೂ ಕಫದ ಮಾದರಿಯನ್ನು ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಬೀದರ್ ಮೂಲದ ವ್ಯಕ್ತಿ ನಾರ್ವೆಗೆ ತೆರಳಿದ್ದರು. ಅಲ್ಲಿಂದ ಮರಳಿ ಬರುವ ವೇಳೆ ಜ್ವರ, ನೆಗಡಿ,ಕೆಮ್ಮು, ಮೂಗಿನಿಂದ ನೀರು ಸೋರುವಿಕೆ ಇತರೆ ತೊಂದರೆಗಳಿಂದ ಬಳಲುತ್ತಿದ್ದರು. ಅಲ್ಲದೆ ಸಮಸ್ಯೆ ಮತ್ತೆ ಉಲ್ಬಣಿಸಿ ಉಸಿರಾಟದ ಸಮಸ್ಯೆ ಕೂಡ ವ್ಯಕ್ತವಾಗಿತ್ತು. (ದಿಗ್ವಿಜಯ ನ್ಯೂಸ್​)