ಜಿಲ್ಲೆ

ಮೃತ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ., ಚೆಕ್ ನೀಡಿದ ಎಚ್‌ಡಿಕೆ

ಗಂಗಾಧರ ಬಿ ವಿ

ಬಿಡದಿ: ಮಳೆಯಿಂದಾಗಿ ಮರ ಉರುಳಿ ಬಿಡದಿಯ ತೊರೆದೊಡ್ಡಿ ಬಳಿ ಮೃತಪಟ್ಟ ಬೋರೇಗೌಡರ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸರ್ಕಾರದಿಂದ ಕೊಡಮಾಡುವ 5 ಲಕ್ಷ ರೂ ಚೆಕ್ ವಿತರಣೆ ಮಾಡಿದರು.

ಮಂಗಳವಾರ ಇಟ್ಟಮಡು ಗ್ರಾಮದ ಬೋರೇಗೌಡ ಮನೆಗೆ ಶಾಸಕ ಎ.ಮಂಜುನಾಥ್ ಅವರೊಟ್ಟಿಗೆ ತೆರಳಿದ ಎಚ್ಡಿಕೆ, ಬೋರೆಗೌಡ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ಬೋರೇಗೌಡರು ಕಷ್ಟಪಟ್ಟು ಜೀವನ ಮಾಡುತ್ತಿದ್ದರು, ನನ್ನ ಮತ್ತು ಪಕ್ಷದ ಒಡನಾಟದಲ್ಲಿ ಇದ್ದರು. ನಮ್ಮ ಜೊತೆಗೂಡಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಅತ್ಯಂತ ನೋವಿನ ಸಂಗತಿ ಮೂವರು ಮಗಳಿದ್ದಾರೆ,ಇಬ್ಬರು ಮದುವೆ ಆಗಿದ್ದಾರೆ ಅವರ ಮಗಳಿಗೆ ಕಂಪ್ಯೂಟರ್ ಕೋರ್ಸ್ ಮಾಡಲು ಹೇಳಿದ್ದೇನೆ ಅವರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.