ವಿಜಯವಾಣಿ ಸುದ್ದಿಜಾಲ ಮಂಗಳೂರು
ಎರಡು ಚಕ್ರಗಳಿರುವ ಸೈಕಲ್‌ನಲ್ಲಿಯೇ ಸುದೀರ್ಘ ಪ್ರಯಾಣ ದೊಡ್ಡ ಸಾಹಸ. ಅಂತಹ ಪರಿಸ್ಥಿತಿಯಲ್ಲಿ ಕೇರಳದ ಯುವಕರೋರ್ವರು ಮುಂಭಾಗದ ಚಕ್ರ (ಫ್ರಂಟ್ ವೀಲ್) ಇಲ್ಲದ ಒಂದು ಚಕ್ರದ ಸೈಕಕಲ್‌ನಲ್ಲಿ ತನ್ನ ಮೂವರು ಸ್ನೇಹಿತರ ಜತೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸವಾರಿ ಹೊರಟಿದ್ದಾರೆ.
ಕೇರಳ ಮೂಲದ ಸನೀದ್ ಅವರು ತನ್ನ ಮೂವರು ಸ್ನೇಹಿತರ ತಂಡದೊಂದಿಗೆ ಕೇರಳದ ಕಾಸರಗೋಡು ಜಿಲ್ಲೆಯಿಂದ ಕನ್ಯಾಕುಮಾರಿಗೆ ತೆರಳಿ ಅಲ್ಲಿಂದ ಪ್ರಯಾಣ ಮುಂದುವರಿಸಿ ಭಾನುವಾರ ಮಂಗಳೂರು ತಲುಪಿದ್ದಾರೆ.
ದೇಶದಾದ್ಯಂತ ಯುವಜನತೆ ದೊಡ್ಡ ಪ್ರಮಾಣದಲ್ಲಿ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು, ಯುವಜನರ ಗಮನ ಸೆಳೆಯುವ ಉದ್ದೇಶದಿಂದ ಈ ಯುವಕರ ಗುಂಪು ಈ ವಿಭಿನ್ನ ರೀತಿಯ ಸಾಹಸಕ್ಕೆ ಮುಂದಾಗಿದೆ.