ಜಿಲ್ಲೆ

ದೇವಸ್ಥಾನ, ಮಠಗಳ ಅಭಿವೃದ್ಧಿಗೆ ಭೂಮಿಪೂಜೆ

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷವಾಗಿ ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿ ಸೇರಿದಂತೆ 28 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಬುಧವಾರ ಚಾಲನೆ ನೀಡಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಮುಜರಾಯಿ ಇಲಾಖೆಯ ವಿಶೇಷ ಅನುದಾನದಲ್ಲಿ ವಾರ್ಡ್ ನಂ.23 ರ ಶಿವಾಯನ ಮಠದ ರಸ್ತೆಯಲ್ಲಿರುವ ದುರ್ಗಮ್ಮ ಮತ್ತು ಹುಚ್ಚಂಗಿ ಎಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ(10 ಲಕ್ಷ ರೂ. ಅನುದಾನ) ಭೂಮಿಪೂಜೆ ನೆರವೇರಿಸಿದರು.

14 ಲಕ್ಷ ರೂ. ಅನುದಾನದಲ್ಲಿ ಹಳೇ ಬಂಡಿಕೇರಿ ರಸ್ತೆಯ ಮಹಾಲಕ್ಷ್ಮೀ ಕೊಲ್ಲಾಪುರದಮ್ಮ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ ನೀಡಿದರು. ಜತೆಗೆ 4 ಲಕ್ಷ ರೂ.ಅನುದಾನದಲ್ಲಿ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ಮುದ್ರಾಪ್ಪನ ಮಠದ ಮುಂದುವರಿದ ಕಾಮಗಾರಿಗೆ ಪೂಜೆ ಮಾಡಿದರು.

ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಬಿಎಲ್‌ಎ-1 ದಿನೇಶ್ ಗೌಡ, ಮುಖಂಡರಾದ ಪರಮೇಶ್ ಗೌಡ, ವಿಘ್ನೇಶ್ವರ ಭಟ್, ರಾಜೇಂದ್ರ, ಮುರುಗೇಶ್, ಮಹೇಶ್, ಗೋಪಾಲಕೃಷ್ಣ, ಸುದರ್ಶನ್, ಸಚಿನ್, ಆರ್. ಮಂಜುನಾಥ್, ಚರಣ್, ಕೆಂಪರಾಜು, ಪಾಪಣ್ಣ, ನಾಗೇಶ್, ರವಿಶಂಕರ್, ಮಧುಸೂದನ್, ನಾಗರಾಜು, ಲೋಹಿತ್, ಸ್ವಾಮಿನಾಥ್, ರವಿ, ಸುಕನ್ಯಾ, ಪದ್ಮಾ, ಚಂದ್ರು, ನವೀನ್, ಯೋಗೇಶ್, ಮಂಜು, ನಿಶಾಂತ್, ಶ್ರೀನಿವಾಸ್, ದುರ್ಗಮ್ಮ ಮತ್ತು ಹುಚ್ಚಂಗಿ ಎಲ್ಲಮ್ಮ ದೇವಸ್ಥಾನದ ಮುಖಂಡರಾದ ಮುಕುಂದ, ಭಗವಾನಿ, ಜಗನ್ನಾಥ್, ಮಹಾದೇವ, ವಾಸುದೇವ ನಾಯಕ್, ಶ್ರೀ ಕೊಲ್ಲಾಪುರ ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷ ನಾಗರಾಜು, ಜವರಪ್ಪ, ರಮೇಶ, ಪುಟ್ಟಮದು, ಗುರುನಾಥ್, ಶ್ರೀ ಮುದ್ರಾಮಪ್ಪನ ಮಠದ ಅಧ್ಯಕ್ಷ ಕೆಂಪರಾಜು, ಜಗದೀಶ್, ಗುರುರಾಜ್, ಉಮೇಶ್, ಲೋಕೇಶ್ ಇದ್ದರು.