ಅರಕಲಗೂಡು: ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಮಂಜು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಶಾಸಕರು ಮಾತನಾಡಿ, 3.27 ಕೋಟಿ ರೂ. ವೆಚ್ಚದಲ್ಲಿ 980 ಚ.ಮೀ. ವಿಸ್ತೀರ್ಣದಲ್ಲಿ ವಸತಿಗೃಹಗಳು ನಿರ್ಮಾಣವಾಗಲಿವೆ. ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ವಸತಿ ಸಮಸ್ಯೆ ನಿವಾರಣೆಯಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು. ಸಿಪಿಐ ವಸಂತ್, ಪಿಎಸ್‌ಐ ಕಾವ್ಯಾ ಇದ್ದರು.