ಜಿಲ್ಲೆ

ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿಪೂಜೆ

ಕುಶಾಲನಗರ: ಕೂಡುಮಂಗಳೂರು ಹಾಗೂ ಕೂಡ್ಲೂರು ಅವಳಿ ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಲಕ್ಷ ರೂ.ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.


ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ಪವನಕುಮಾರ್ ಮಾತನಾಡಿ, ಭಕ್ತರ ಸಹಕಾರದಿಂದ ಈಗಾಗಲೇ ದೊಡ್ಡಮ್ಮನ ಬನದಲ್ಲಿನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಹಾಗೆಯೇ ದೇವಾಲಯದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ದೇವಾಲಯದ ಆವರಣದಲ್ಲಿ ಹೆದ್ದಾರಿಗೆ ಅಭಿಮುಖವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಸಮಿತಿ ಉದ್ದೇಶಿಸಿದ್ದು, ಅದರಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.


ಕುಶಾಲನಗರದ ಪುರೋಹಿತ ಸುಬ್ರಾಮ ಭಟ್ ಪೂಜಾ ವಿಧಿ ವಿಧಾನ ನಡೆಸಿದರು.
ಸಮಿತಿಯ ಖಜಾಂಚಿ ಕೆ.ಆರ್.ಶಿವಣ್ಣ, ಹಿರಿಯರಾದ ಕೆ.ಎಸ್.ರಾಜಾಚಾರ್, ಕೆ.ಕೆ.ಮಂಜುನಾಥ ಕುಮಾರ್, ವಿ.ಎಂ.ಮಂಜುನಾಥ್, ವೆಂಕಟೇಶ್, ನಂಜುಂಡರಾಜ ಅರಸು, ವೈ.ಟಿ.ಪರಮೇಶ್, ದೇವಾಲಯದ ಅರ್ಚಕ ಕರಿಯಪ್ಪ ಮತ್ತಿತರರು ಹಾಜರಿದ್ದರು.