ಜಿಲ್ಲೆ

ಸೆಂಟ್ರಲ್ ಕ್ಷೇತ್ರದ ಕಾಮಗಾರಿಗಳಿಗೆ ಭೂಮಿಪೂಜೆ

ಹುಬ್ಬಳ್ಳಿ : ಹುಬ್ಬಳ್ಳಿಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ 56ನೇ ವಾರ್ಡ್ ವ್ಯಾಪ್ತಿಯ ಜನತಾ ಕಾಲನಿಯ ಕಾರವಾರ ರಸ್ತೆಯಿಂದ ಕೆಎಚ್​ಬಿ ಕಾಲನಿಯವರೆಗೆ ಸಿ.ಸಿ. ರಸ್ತೆ ಕಾಮಗಾರಿ ಹಾಗೂ ಜನತಾ ಕ್ವಾಟರ್ಸ್​ನಲ್ಲಿ ಒಳಚರಂಡಿ ಕೊಳವೆ ಹಾಕುವುದು ಮತ್ತು ತೆರೆದ ಚರಂಡಿ ನಿಮಾಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸದಸ್ಯೆ ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಪ್ರಮುಖರಾದ ಸುಭಾಷ ಅಕ್ಕಲಕೋಟಿ ಹಾಗೂ ಇತರರು ಹಾಜರಿದ್ದರು