ಜಿಲ್ಲೆ

ಬಿಜೆಪಿ ಕೆದಂಬಾಡಿ ಶಕ್ತಿಕೇಂದ್ರ ಅಭ್ಯಾಸವರ್ಗ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ಕೆದಂಬಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಭಾನುವಾರ ನಡೆಯಿತು.

ಬಿಜೆಪಿಯ ಹಿರಿಯ ಕಾರ್ಯಕರ್ತ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್‌ಮಾತನಾಡಿದರು. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನರಿಮೊಗರು ಬಿಜೆಪಿ ಮಹಾ ಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಸತೀಶ್ ಪಾಂಬಾರು, ಕೆದಂಬಾಡಿ ಶಕ್ತಿಕೇಂದ್ರ ಪ್ರಮುಖ್ ಶರತ್ ಗುತ್ತು ಉಪಸ್ಥಿತರಿದ್ದರು.

‘ನಮ್ಮ ಪೈಚಾರಿಕತೆ ಮತ್ತು ಪಂಚ ಪರಿವರ್ತನೆ’ ವಿಷಯದ ಕುರಿತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್, ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ಎಂಬ ವಿಷಯದ ಕುರಿತು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಹಾಗೂ ‘ವಿಕಸಿತ ಭಾರತದ ಅಮೃತಕಾಲ- ನಮ್ಮ ಸಕ್ರಿಯತೆ’ ವಿಷಯದ ಕುರಿತು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಪ್ರಶಿಕ್ಷಣ ವರ್ಗ ಸಂಚಾಲಕ ಸುಧಾಕರ ಆಚಾರ್ಯ, ಕೆದಂಬಾಡಿ ಶಕ್ತಿ ಕೇಂದ್ರ ಪ್ರಮುಖ್ ಶರತ್ ಗುತ್ತು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ, ಪ್ರಶಿಕ್ಷಣ ವರ್ಗ ಶಕ್ತಿಕೇಂದ್ರ ಪ್ರಭಾರಿ ವಿಜಯಕುಮಾರ್ ರೈ ಕೋರಂಗ, ಗ್ರಾಮಾಂತರ ಮಂಡಲದಿಂದ ಪ್ರಶಿಕ್ಷಣ ವರ್ಗ ಸಂಚಾಲಕ ವಿರೂಪಾಕ್ಷ ಭಟ್ ಮಚ್ಚಿಮಲೆ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಯತೀಂದ್ರ ಕೊಚ್ಚಿ, ಬಿಜೆಪಿ ಪ್ರಮುಖರಾದ ಕಡಮಜಲು ಸುಭಾಷ್ ರೈ, ಕೃಷ್ಣಕುಮಾರ್ ರೈ ಗುತ್ತು, ಗೀತಾ ಸತೀಶ್ ರೈ ಗುತ್ತು, ರಾಜೀವ ರೈ ಕೋರಂಗ, ಶಿವರಾಮ ಗೌಡ ಇದ್ಯಪೆ, ಗಣಪತಿ ಭಟ್, ಕರುಣಾಕರ ರೈ ಅತ್ರೆಜಾಲು, ಜಯರಾಮ ರೈ ಬಾಲಯ, ಮೋಹನ್ ಆಳ್ವ ಮುಂಡಾಲಗುತ್ತು, ನೇಮಿರಾಜ ರೈ ಕುರಿಕ್ಕಾರ, ಅಮರ್ ರೈ ದರ್ಬೆ, ಗಂಗಾಧರ ನಾಯ್ಕ ಮುಳಿಗದ್ದೆ, ಧನಂಜಯ್ ಗೌಡ ಪಟ್ಟೆ, ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಮತ್ತಿತರರಿದ್ದರು.