ಹುಲಸೂರು ತಾಲೂಕಿನ ಸೋಲದಾಬಕಾದಲ್ಲಿ ಪಿಕೆಪಿಎಸ್ ಸಹಕಾರ ಸಂಘದಿಂದ ನಿರ್ಮಿಸಲಾಗುತ್ತಿರುವ ಉಗ್ರಾಣ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ , ಶಾಸಕ ಶರಣು ಸಲಗರ, ಓಂಕಾರ ಪಟ್ನೆ, ಸುಧೀರ ಕಾಡಾದಿ, ಲತಾ ಹಾರಕೂಡೆ, ಬಸವರಾಜ ಜಡೆಗೆ ಇತರರಿದ್ದರು. 
ಜಿಲ್ಲೆ

ರೈತರಿಗೆ ಶೀಘ್ರದಲ್ಲಿ ಮಧ್ಯಮಾವಧಿ ಸಾಲ

ಹುಲಸೂರು: ಜಿಲ್ಲೆಯ ಕೆಲ ಪಿಕೆಪಿಎಸ್ ಸಹಕಾರ ಸಂಘಗಳಲ್ಲಿ ರೈತರು ಮಧ್ಯಮಾವಧಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿರುವ ಸಂಘಗಳನ್ನು ಗುರುತಿಸಿ ಶೀಘ್ರವಾಗಿ ಮತ್ತೊಮ್ಮೆ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಭರವಸೆ ನೀಡಿದರು.

ಸೋಲದಾಬಕಾ ಗ್ರಾಮದಲ್ಲಿ ಹುಲಸೂರು ಪಿಕೆಪಿಎಸ್ ಸಹಕಾರ ಸಂಘದ ಸ್ವಂತ ಬಂಡವಾಳದಿಂದ ನಿರ್ಮಿಸಲಾಗುತ್ತಿರುವ ಉಗ್ರಾಣ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಲಸೂರು ಪಿಕೆಪಿಎಸ್ ಸಹಕಾರ ಸಂಘ ಉತ್ತಮ ಬೆಳವಣಿಗೆ ಹೊಂದಿ ಸೋಲದಾಪಕಾದಲ್ಲಿ ಸ್ವಂತ ಬಂಡವಾಳದಲ್ಲಿ ಉಗ್ರಾಣ ನಿರ್ಮಿಸುತ್ತಿರುವುದು ಸಂತಸ ತಂದಿದೆ. ಜಿಲ್ಲೆಯ ಕೆಲ ಸಹಕಾರ ಸಂಘಗಳು ಕೆಲಸ ಮಾಡುತ್ತಿದ್ದರಿಂದ ಬ್ಯಾಂಕ್ ಒಳ್ಳೆಯ ಹೆಸರು ಬಂದಿದೆ ಎಂದು ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ, ಯಾವುದೇ ಅಧಿಕಾರ ಶಾಶ್ವತವಲ್ಲ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ರೈತರಿಗೆ ಯಾವುದೇ ರೀತಿ ಹೊರೆ ಬೀಳದಂತೆ ಕೆಲಸ ಮಾಡಬೇಕು. ಈಗಿರುವ ಆಡಳಿತ ಮಂಡಳಿ ಮೇಲೆ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯರಾದ ಮಲ್ಲಪ್ಪ ಧಬಾಲೆ, ಸುಧೀರ ಕಾಡಾದಿ, ತಾಪಂ ಮಾಜಿ ಸದಸ್ಯ ಗೋವಿಂದರಾವ ಸೋಮೊವಂಶಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಗ್ರಾಪಂ ಸದಸ್ಯರಾದ ನಿಂತೇಶ ಪಾಟೀಲ್, ಕುಮಾರ ಗೋರೆ ಪ್ರಮುಖರಾದ ಕಾಶಿನಾಥ ಪಾಟೀಲ್ ಮಾಚನಾಳ, ಎಂ.ಜಿ ರಾಜೋಳೆ, ಬಸವರಾಜ ಜಡೆಗೆ, ಪ್ರವೀಣ ಕಾಡಾದಿ, ಗುಣವಂತರಾವ ಸಲಹೆ, ಅಶೋಕ ಮೇತ್ರೆ, ರೂಪಾವತಿ ಜಾಧವ್, ಜನಾಬಾಯಿ ಬಿರಾದಾರ, ಹೀರು ತುಳಸಿರಾಮ, ಅನಿಲ ಬಂಗ, ನಂದಕುಮಾರ ಮುಸ್ತಾಪುರೆ, ಸೋಮನಾಥ ಮಹಾರಾಜ, ರತನ ಜಾಧವ್ ಇದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ, ನಿರೂಪಣೆ ಮಾಡಿದರು.