ಜಿಲ್ಲೆ

66.60ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 66.60ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

15ನೇ ಹಣಕಾಸು ಯೋಜನೆಯಲ್ಲಿ 21.60 ಲಕ್ಷ ರೂ.ಗಳು ಹಾಗೂ 2024-25ನೇ ಸಾಲಿನ ಶಾಸಕರ ವಿಶೇಷ ಅನುದಾನದಲ್ಲಿ 45ಲಕ್ಷ ರೂ.ಗಳ ಕಾಮಗಾರಿಗಳಿಗೆ ಅನುದಾನ ಕಲ್ಪಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಇನ್ನು 50ಲಕ್ಷ ರೂ.ಗಳ ಅನುದಾನ ಬಿಡುಗಡೆ ಹಂತದಲ್ಲಿದೆ. ಅಮೃತ ಯೋಜನೆಯಡಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರು ಹಾಗು ಇಂಜಿನಿಯರ್‌ಗಳು ಗುಣಮಟ್ಟದ ಕಾಮಗಾರಿ ಮಾಡಬೇಕು. 20 ವರ್ಷ ಕಾಮಗಾರಿ ಬಾಳಿಕೆ ಬಂದರೆ ಮಾತ್ರ ಅದು ಗುಣಮಟ್ಟದ ಕಾಮಗಾರಿ ಎನಿಸಿಕೊಳ್ಳುತ್ತದೆ. ಕಾಮಗಾರಿ ವಿಷಯದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಸದಸ್ಯ ಪಿ.ಕೆ.ಚಂದ್ರು, ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಮೃತ್ಯುಂಜಯ, ಬಿ.ಸಂಜೀವ, ಶುಭಕರ್, ಜೀವನ್, ಡಿ.ಯು.ಕಿರಣ್, ವಿನಯ್, ಎಚ್.ಸಿ.ನಾಗೇಶ್, ಎಂ.ಎ.ರುಬಿನಾ, ಶುಭಾ ಬಾಬುರೈ, ಮುಖ್ಯಾಧಿಕಾರಿ ಸತೀಶ್, ಇಂಜಿನಿಯರ್ ಹೇಮಂತ್ ಇದ್ದರು.