ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಪ್ರತಿ ಗ್ರಾಮ ಅಭಿವೃದ್ಧಿ ಹೊಂದಿದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಎಸ್.ಶ್ರೀನಿವಾಸ ತಿಳಿಸಿದರು.
ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂ ಹಾಗೂ ಸೋಂಪುರ ಗ್ರಾಪಂನ ಪೇಮ್ಮನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿ ಕಂಪನಿಯೂ ಗ್ರಾಮಗಳನ್ನು ದತ್ತು ಪಡೆದು, ಸಿಎಸ್‌ಆರ್ ಯೋಜನೆಯಿಂದ ಅಭಿವೃದ್ಧಿ ಪಡಿಸಿದರೆ ಗ್ರಾಮಗಳು ಪ್ರಗತಿಹೊಂದುತ್ತವೆ ಎಂದ ಅವರು, ಪ್ರಸ್ತುತ ಕೈಗೊಂಡಿರುವ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಕೆ.ಗೋಂವಿದರಾಜು ಮಾತನಾಡಿ, ಶಾಸಕರು ಕೋಟ್ಯಂತರ ರೂಪಾಯಿ ಕಾಮಗಾರಿಗಳಿಗೆ ಪೂಜೆ ಮಾಡಿದ್ದಾರೆ. ಸರ್ಕಾರ ನೀಡಿರುವ ಗ್ಯಾರಂಟಿಗಳು ಪ್ರತಿಯೊಬ್ಬರಿಗೂ ತಲುಪಿವೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ಗ್ರಾಪಂ ಸದಸ್ಯರಾದ ಪ್ರಭಾವತಿ, ಡಿ.ಟಿ.ವೆಂಕಟಾಚಲಯ್ಯ, ಮುಖಂಡರಾದ ಎಲ್.ಆರ್.ಸಿದ್ದರಾಜು, ಕಲೀಂ ಪಾಷಾ, ಆರ್.ಶಿವಕುಮಾರ್, ಹನುಂತರಾಜು, ಸಿದ್ದರಾಮಯ್ಯ, ಹೊಸಳಯ್ಯ, ಕೆ.ತಿರುಮಲೇಶ್, ಲಕ್ಕೂರು ಸಿದ್ದರಾಜು, ಪೆಮ್ಮನಹಳ್ಳಿ ದೇವರಾಜು, ಬರಗೇನಹಳ್ಳಿ ರಾಜಣ್ಣ, ಲಕ್ಕೂರು ರಾಜಣ್ಣ , ವಿ.ಎಚ್.ಗಂಗರುದ್ರಯ್ಯ ಇದ್ದರು.