ಜಿಲ್ಲೆ

ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ

ಕಿರಣ್ ಗೌಡ.ಜಿ

ತಿ.ನರಸೀಪುರ: ಹೆದ್ದಾರಿಗಳನ್ನು ಸಂಪರ್ಕಿಸುವ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ಅಭಿವೃದ್ಧಿಗೊಳಿಸಲು ಹಾಗೂ ದುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಡಾಂಬರೀಕರಣವನ್ನು ರಾಜ್ಯ ಸರ್ಕಾರ ಅನುದಾನದಲ್ಲಿ ಮಾಡಲಾಗುತ್ತಿದೆ ಎಂದು ಸಂಸದ ಸುನಿಲ್ ಬೋಸ್ ಹೇಳಿದರು.

ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಭಾನುವಾರ 4.82 ಕೋಟಿ ರೂ.ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ತಾಲೂಕಿನ ಗಡಿ ಗ್ರಾಮವಾದ ಯಾಚೇನಹಳ್ಳಿಯಲ್ಲಿ ಹದಗೆಟ್ಟಿದ್ದ ಬನ್ನೂರು ಮುಖ್ಯ ರಸ್ತೆಯನ್ನು ನವೀಕರಣಗೊಳಿಸಲು 6 ಕೋಟಿ ರೂ.ಗಳಿಗೆ ಯೋಜನೆ ರೂಪಿಸಲಾಗಿತ್ತು. ಆದರೆ 4.82 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಶ್ರೀ ರಾಮಕೃಷ್ಣ ಸೇವಾ ಆಶ್ರಮದ ನಾದನಂದನಾಥ ಸ್ವಾಮೀಜಿ, ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ, ಉಪಾಧ್ಯಕ್ಷ ವೈ.ಎಂ.ಚಂದ್ರು, ನಾಡಗೌಡರಾದ ವೈ.ಎಚ್. ಹನುಮಂತೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷಾ, ಮಾಜಿ ಉಪಾಧ್ಯಕ್ಷ ಬಿ.ಸಿ.ಪಾರ್ಥಸಾರಥಿ, ಸಹಾಯಕ ಪ್ರಾಧ್ಯಾಪಕ ಡಾ.ಬಿ ಕೆ.ಜ್ಞಾನಪ್ರಕಾಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ, ಸೋಮಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಸಿ.ಶಿವಕುಮಾರ, ಉಪಾಧ್ಯಕ್ಷೆ ಪಿ.ಶ್ವೇತಾ, ವೈ.ಎಸ್.ರಾಮಸ್ವಾಮಿ, ವೈ.ಟಿ.ಮಹೇಶ್ ಕುಮಾರ್, ಶೇಖರ್, ಸರೋಜಮ್ಮ, ಪ್ರೇಮಮ್ಮ, ಪಿಡಿಒ ವಿ.ಬಿ.ಕುಮಾರಸ್ವಾಮಿ, ಮಾಜಿ ಸದಸ್ಯ ಅಶೋಕ್ ಕುಮಾರ್, ಕುಕ್ಕುರು ಗಣೇಶ್, ರಾಮಲಿಂಗಯ್ಯ, ಆಪ್ತ ಸಹಾಯಕ ಬಿ.ಬಸವರಾಜು, ರಾಷ್ಟ್ರೀಯ ಹೆದ್ದಾರಿ ಕಿರಿಯ ಇಂಜಿನಿಯರ್ ಬಿ.ಎ.ಮಹೇಶ್, ಗುತ್ತಿಗೆದಾರರಾದ ಬಿ.ಎಸ್.ಯೋಗಾನಂದ, ಅರವಿಂದ ಕುಮಾರ್, ರಾಮಕೃಷ್ಣ, ಜಿ.ಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಶಿವರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಪೊಲೀಸ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್, ಮುಖಂಡರಾದ ಸ್ವಾಮಿಗೌಡ, ಕುಮಾರ್ ರಾಮೇಗೌಡ, ಕೃಷ್ಣಗೌಡ, ಸೋಸಲೆ ಮಹದೇವಸ್ವಾಮಿ, ಪರಶಿವಮೂರ್ತಿ, ಡಿ.ಆರ್. ಮೂರ್ತಿ ಹಾಗೂ ಇತರರು ಇದ್ದರು.