ವಿಜಯವಾಣಿ ಸುದ್ದಿಜಾಲ ಕಾರ್ಕಳ
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೋಳ ಮೈಂದ್ಕಲ್ ನಿವಾಸಿ ಸುಮತಿ ಕೊರಗ ಮೂಲ್ಯ ದಂಪತಿಗೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಮನೆ ನಿರ್ಮಾಣಕ್ಕೆ ನಂದಳಿಕೆ ಪಾರ್ಲ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ಭೂಮಿ ಪೂಜೆ ನೆರವೇರಿತು.
ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಅಬ್ಬನಡ್ಕ ಗೃಹ ನಿರ್ಮಾಣ ಸಮಿತಿ ಅಧ್ಯಕ್ಷ ಇನ್ನಾ ಪ್ರೇಮ್ ಕುಲಾಲ್ ಶಿಲಾನ್ಯಾಸಗೈದರು.
ಉದ್ಯಮಿಗಳಾದ ಮರಿಮಾರಗುತ್ತು ಅವಿನಾಶ್ ಮಲ್ಲಿ, ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಅಂಚನ್, ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಇನ್ನಾ ಕುಶ ಆರ್.ಮೂಲ್ಯ, ಪ್ರಮುಖರಾದ ಬೆಳ್ಮಣ್ ಜಗನ್ನಾಥ್ ಮೂಲ್ಯ, ದೀಪಕ್ ಕುಲಾಲ್, ಕೇಶವ ಪೂಜಾರಿ, ಅನಿತಾ ಡಿಸೋಜ, ಬೋಳಪದವು ಗಣೇಶ್ ಕುಲಾಲ್, ಶಂಕರ ಮೂಲ್ಯ, ಮಂಜುನಾಥ ಪೂಜಾರಿ, ಅಬ್ಬನಡ್ಕ ಸದಾಶಿವ ಪುತ್ರನ್, ಮೈಂದ್ಕಲ್ ನಾರಾಯಣ ಪೂಜಾರಿ, ಬೋಳ ಬಿ.ಎಸ್ ರವಿ ಆಚಾರ್ಯ, ವಿಜಯ ಕುಲಾಲ್, ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.ಪೂಜಾರಿ, ಸಂತೋಷ್ ಕುಲಾಲ್ ಇನ್ನಾ, ಸತೀಶ್ ಪೂಜಾರಿ, ಸಂಧ್ಯಾ ಶೆಟ್ಟಿ, ಲೀಲಾ ಪೂಜಾರಿ, ಮಂಜುನಾಥ್ ಆಚಾರ್ಯ, ಸುರೇಶ್ ಅಬ್ಬನಡ್ಕ, ಹರಿಣಿ ಪೂಜಾರಿ, ಅಶ್ವಿನಿ ಪ್ರಭಾಕರ್, ವೀಣಾ ಆಚಾರ್ಯ, ಪ್ರದೀಪ್ ಸುವರ್ಣ ಕೆಮ್ಮಣ್ಣು ಮೊದಲಾದವರಿದ್ದರು.