ನರಗುಂದ: ಪಟ್ಟಣದ ದಂಡಾಪೂರ 6ನೇ ಗಲ್ಲಿಯಲ್ಲಿಯ ವೀರಭದ್ರೇಶ್ವರ ದೇವಸ್ಥಾನ ಜೀಣೋದ್ಧಾರ ಹಾಗೂ ನೂತನ ಗೋಪುರ ನಿರ್ಮಾಣ ಕಾರ್ಯಕ್ರಮದ ಭೂಮಿ ಪೂಜೆಯನ್ನು ಶಾಸಕ ಸಿ.ಸಿ. ಪಾಟೀಲ ನೆರವೇರಿಸಿ ಮಂದಿರ ನಿರ್ಮಾಣ ಮತ್ತು ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ರಾಜ್ಯ ಕಾಂಗ್ರೆಸ್ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ವೀರಭದ್ರೇಶ್ವರ ದೇವಸ್ಥಾನದ ಜೀಣೋದ್ಧಾರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪಂಚಗ್ರಹ ಗುಡ್ಡದ ಸಿದ್ಧ್ದಂಗ ಶಿವಾಚಾರ್ಯರು, ಪತ್ರಿವನಮಠದ ಡಾ. ಗುರುಸಿದ್ಧ್ದವಯೋಗಿ ಶಿವಾಚಾರ್ಯರು, ಬೈರನಹಟ್ಟಿ ಮತ್ತು ಶಿರೋಳ ಮಠಗಳ ಶಾಂತಲಿಂಗ ಸ್ವಾಮಿಗಳು, ನರಗುಂದ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ ಯಾವಗಲ್, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಎಸ್.ಎ. ಕಾಳಗಿ, ರಾಜು ಕಲಾಲ, ಸುರೇಶ ಹುಯಿಲಗೋಳ, ರವಿ ಪಾಟೀಲ, ಪುರಸಭೆ ಸದಸ್ಯ ಅಪ್ಪಣಗೌಡ ನಾಯ್ಕರ್, ವಿ.ಎನ್. ಕೊಳ್ಳಿಯವರ ಇನ್ನಿತರರು ಉಪಸ್ಥಿತರಿದ್ದರು.