ಜಿಲ್ಲೆ

ರೇಣುಕಾದೇವಿ ದೇವಸ್ಥಾನಕ್ಕೆ ಭೂಮಿ ಪೂಜೆ

ವಿವೇಕಾನಂದ ದಾಸನಕೊಪ್ಪ

ಹಿರೇಕೆರೂರ: ತಾಲೂಕಿನ ಹಿರೇಕೊಣತಿ ಗ್ರಾಮದಲ್ಲಿ ರೇಣುಕಾದೇವಿ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ಯು.ಬಿ. ಬಣಕಾರ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ದೇವಸ್ಥಾನ ಮಠ, ಮಂದಿರಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ ಕೊಡುವ ತಾಣಗಳಾಗಿವೆ. ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ಜೀವನ ಸಾಗಿಸಬೇಕು. ನಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಧರ್ಮ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಗ್ರಾಪA ಅಧ್ಯಕ್ಷೆ ಲಲಿತಾ ಕೆಂಗಲರ, ಉಪಾಧ್ಯಕ್ಷೆ ಲಲಿತಮ್ಮ ಹಿರೇಮಠ, ಸದಸ್ಯರಾದ ಶಿವಶಂಕರ ಹಿರೇಮಠ, ಮಂಜಪ್ಪ ಮೂಲೇರ, ಶಾಂತನಗೌಡ ದೊಡ್ಡಗೌಡ್ರ, ಮುಖಂಡರಾದ ಶಿವಪ್ಪ ಕೆಳಗಿನಮನಿ, ವಿನೋದಮ್ಮ ಕೆಳಗಿನಮನಿ, ಬಸನಗೌಡ ಮಳವಳ್ಳಿ, ಸುರೇಶಪ್ಪ ಸೋಮಣ್ಣನವರ, ಜೆಟ್ಟಪ್ಪ ಕವಲಿ, ಮಲ್ಲಿಕಾರ್ಜುನಪ್ಪ ಹುರಳಿ, ಹೂವಪ್ಪ ಕವಲಿ, ಶೇಖಯ್ಯ ಹಿರೇಮಠ, ನಾಗಪ್ಪ ಬಣಕಾರ, ಶೇಕಪ್ಪ ಸಣ್ಣಗೌಡ್ರ, ಪ್ರಭಾಚಾರಿ ಬಡಿಗೇರ, ಶಾಂತಪ್ಪ ಬಂಡೇರ, ಚಂದ್ರಪ್ಪ ಶಿಡ್ಡಳ್ಳಿ, ಮಂಜಪ್ಪ ಕೊರಟಕೆರೆ, ರುದ್ರಪ್ಪ ಬಡಿಗೇರ, ಮಂಜಪ್ಪ ನಿಂಗಮ್ಮನವರ, ನಾಗಪ್ಪ ಕೊರಟಕೆರೆ ಚನ್ನಬಸನಗೌಡ ಹಿತ್ತಲಮನಿ ಇದ್ದರು.