ಹುನಗುಂದ ತಾಲೂಕಿನ ಬಿಸನಾಳಕೊಪ್ಪದ ಪುನರ್ ವಸತಿ ಕೇಂದ್ರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದರು. ಗಂಗಾಧರ ದೊಡಮನಿ, ಸಂಗಣ್ಣ ಶಿರೂರ, ತಿಮ್ಮಣ್ಣ ಮಾದರ ಮತ್ತಿತರರಿದ್ದರು. 
ಜಿಲ್ಲೆ

ಕೂಡು ರಸ್ತೆ ಕಾಮಗಾರಿಗೆ ಭೂಮಿಪೂಜೆ

ವಿನಯ ಆಶೋಕ ನಾಯ್ಕ

ಹುನಗುಂದ: 2013-14ರಲ್ಲಿ ತಾಲೂಕಿನ 10 ಗ್ರಾಮಗಳನ್ನು ಪುನರ್ ವಸತಿ ಮಾಡಲು ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲೂಕಿನ ಬಿಸನಾಳಕೊಪ್ಪದ ಪುನರ್ ವಸತಿ ಕೇಂದ್ರದಲ್ಲಿ 2.46 ಕೋಟಿ ರೂ. ವೆಚ್ಚದ ಕೂಡು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 5 ವರ್ಷದ ಹಿಂದೆ ಆಡಳಿತ ಮಾಡಿದ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಪುನರ್ ವಸತಿ ಕೇಂದ್ರಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ನಾರಾಯಣಪುರ ಜಲಾಶಯ ನಿರ್ಮಾಣದ ವೇಳೆ ಮನೆ, ಭೂಮಿ ಕಳೆದುಕೊಂಡ ಇನ್ನೂ ಕೆಲವು ಸಂತ್ರಸ್ತರಿಗೆ ಹಕ್ಕುಪತ್ರ ನೀಡುವುದು ಬಾಕಿ ಇದೆ. ಅಂತವರಿಗೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡುತ್ತೇವೆ. ಸರ್ಕಾರದ ಅನುಮತಿ ಪಡೆದು ಮೂಲಸೌಕರ್ಯಗಳ ಕಾಮಗಾರಿ ಮುಗಿಸಿಕೊಡುತ್ತೇವೆ. ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.

ಗುತ್ತಿಗೆದಾರ ಎನ್.ವಿ. ಮೇಟಿ ಮಾತನಾಡಿದರು.

ಯೋಜನೆಯ ಅಧಿಕಾರಿ ಬಸವರಾಜ ಭದ್ರಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಂಗಾಧರ ದೊಡಮನಿ, ಸಂಗಣ್ಣ ಶಿರೂರ, ತಿಮ್ಮಣ್ಣ ಮಾದರ, ಮಹಾಂತೇಶ ಲಗಮನ್ನವರ, ಕಾಂತಪ್ಪ ಗುಡಗೂಳಿ, ಸತ್ತಪ್ಪ ಬಾಲನಗೌಡರ, ಮಹಾಂತಪ್ಪ ವಾಲೀಕಾರ ಗ್ರಾಮಸ್ಥರು ಇದ್ದರು.