ಜಿಲ್ಲೆ

ಪಂ. ಭೀಮಸೇನ ಜೋಶಿ ಸ್ಮರಣೆ 8ರಂದು

ವೀರೇಶ ಸೌದ್ರಿ

ಶಿರಸಿ: ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ಸ್ಮರಣೆ ಪ್ರಯುಕ್ತ ಇಲ್ಲಿನ ಪ್ರಜ್ವಲ ಟ್ರಸ್ಟ್ ಮತ್ತು ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್‌ನಿಂದ ಗಾಯನ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಂಗಣದಲ್ಲಿ ಜೂ. 8 ರಂದು ಸಂಜೆ 5 ಗಂಟೆಯಿಂದ ನಡೆಯಲಿದೆ ಎಂದು ಗಾಯಕ ವಿನಾಯಕ ಮುತ್ಮುರುಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಪಂ. ಶ್ರೀನಿವಾಸ ಜೋಶಿ ಪುಣೆ ಹಾಗೂ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪಂ. ಭೀಮಸೇನ ಜೋಶಿಯವರ ಮೊಮ್ಮಗ, ಪಂ ಶ್ರೀನಿವಾಸ ಜೋಶಿ ಶಿಷ್ಯ ವಿರಾಜ ಜೋಶಿ ಹಾಗೂ ಪಂ. ರಾಜನ್ ಮತ್ತು ಸಾಜನ್ ಮಿತ್ರ ಶಿಷ್ಯೆ ವಿದುಷಿ ಜಸ್ಮೀತ ಕೌರ್ ಗಾಯನ ಪ್ರಸ್ತುತಪಡಿಸಲಿದ್ದಾರೆ.

ತಬಲಾದಲ್ಲಿ ಪಂ. ಭರತ ಕಾಮತ ಪುಣೆ, ಮಧು ಕುಡಾಲ್ಕರ ಅಂಕೋಲಾ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ಭರತ ಹೆಗಡೆ ಶಿರಸಿ, ಪಖವಾಜ್‌ನಲ್ಲಿ ಧ್ಯಾನೇಶ್ವರ ದುಢಾನೆ ಪಂಢರಪೂರ, ಮಂಜಿರಾದಲ್ಲಿ ದೇವದಾಸ ನಾಗರಮಠ ಮಂಗಳೂರು, ರವಿ ಹೆಗಡೆ ಸಾಥ್ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಂದು ಹೆಗಡೆ, ಕಾರ್ಯದರ್ಶಿ ಸುಮಾ ಹೆಗಡೆ, ವೆಂಕಟೇಶ ಹೆಗಡೆ, ಗೌರೀಶ ಚೌಧರಿ, ವಿವೇಕ ಭಾಸ್ಕರ, ಪ್ರಶಾಂತ ಉಪಸ್ಥಿತರಿದ್ದರು.