ಜಿಲ್ಲೆ

ಭೀಮೋತ್ಸವ 20ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಿ.ಆರ್​.ಅಂಬೇಡ್ಕರ್​ ಜಯಂತಿ ನಿಮಿತ್ತ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕ ವತಿಯಿಂದ ಏ. 20ರಂದು ನಗರದಲ್ಲಿ ಭೀಮೋತ್ಸವ ಆಯೋಜಿಸಲಾಗಿದೆ ಎಂದು ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಸಗಬಾಲ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಕಡಪಾ ಮೈದಾನದಲ್ಲಿ ಅಂಬೇಡ್ಕರ್​ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದ್ದು, ಗಾಂಧಿ ಚೌಕ್​, ಜೈ ಭೀಮನಗರ, ಕಿಟೆಲ್​ ಕಾಲೇಜು ಮಾರ್ಗವಾಗಿ ಕಡಪಾ ಮೈದಾನದಲ್ಲಿ ಸಂಪನ್ನವಾಗಲಿದೆ. ವಿವಿಧ ಜನಪದ ಕಲಾತಂಡಗಳು ಭಾಗವಹಿಸಲಿವೆ ಎಂದರು.

ಸಂಜೆ 4 ಗಂಟೆಗೆ ಕಡಪಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಧಾನ ಭಾಷಣ ಮಾಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಜಿ. ಪರಮೇಶ್ವರ, ಸಚಿವರಾದ ಡಾ. ಎಚ್​.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಕೆ.ಎಚ್​. ಮುನಿಯಪ್ಪ, ಸಂತೋಷ ಲಾಡ್​ ಪಾಲ್ಗೊಳ್ಳುವರು ಎಂದರು.

ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡ ಎಂ.ಅರವಿಂದ, ದಾನಪ್ಪ ಕಬ್ಬೇರ, ಅಶೋಕ ದೊಡ್ಡಮನಿ, ಪರಮೇಶ್ವರ ಕಾಳೆ, ಯಲ್ಲಪ್ಪ ಮಂಟೂರ, ಡಿ.ಪಿ. ಕಾಂಬಳೆ, ಇತರರು ಇದ್ದರು.