ಬೇಲೂರು ತಾಲೂಕಿನ ನಾರ್ವೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾಲಾಶ್ರೀ, ಗಂಗಾಧರ್ ಬಹುಜನ್, ರಾಜು, ಚಂದ್ರು, ಮಲ್ಲಿಕಾರ್ಜುನ ಸುಲಗಳಲೆ, ಬೇಬಿ ಪ್ರಕಾಶ್, ಪವಿತ್ರಾ, ಮಲ್ಲಿಕಾರ್ಜುನ್ ನಾರ್ವೆ, ಮಂಜುನಾಥ್, ಲೋಕೇಶ್, ಪುನೀತ್, ಸೋಮಯ್ಯ, ಪರಮೇಶ್, ಶೇಷರಾಜ್, ದಿನೇಶ್, ಕ್ರಾಂತಿ, ರವಿ, ರಮೇಶ್, ಬಾಬು, ಮೂರ್ತಿ, ನಿಂಗರಾಜ್ ಇತರರು ಇದ್ದರು.  
ಜಿಲ್ಲೆ

ನಾರ್ವೆ ಗ್ರಾಮದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು.

ನಾರ್ವೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭೀಮಾ ಕೋರೆಗಾಂವ್ ವಿಜಯ ಸ್ತಂಭವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಡಿಜೆ ಸೌಂಡ್ ಸಿಸ್ಟಂ ಮೂಲಕ ಗ್ರಾಮಸ್ಥರು ಕುಣಿಯುತ್ತ ಹೆಜ್ಜೆ ಹಾಕಿದರು.

ಬಳಿಕ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಉದ್ಘಾಟಿಸಿದರು. ಸಾಮಾಜಿಕ ಪರಿವರ್ತನಾ ಚಳವಳಿ ಮುಖಂಡ ಗಂಗಾಧರ್ ಬಹುಜನ್, ವಕೀಲ ರಾಜು, ವಿಜಯೋತ್ಸವ ಸಮಿತಿ ಅಧ್ಯಕ್ಷ ಚಂದ್ರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ ಸದಸ್ಯರಾದ ಬೇಬಿ ಪ್ರಕಾಶ್, ಪವಿತ್ರಾ, ಮಲ್ಲಿಕಾರ್ಜುನ್ ನಾರ್ವೆ, ಮಂಜುನಾಥ್, ಲೋಕೇಶ್, ಪುನೀತ್, ತಾಪಂ ಮಾಜಿ ಸದಸ್ಯ ಸೋಮಯ್ಯ, ಮುಖಂಡರಾದ ಪರಮೇಶ್, ಶೇಷರಾಜ್, ದಿನೇಶ್, ಕ್ರಾಂತಿ, ರವಿ, ರಮೇಶ್, ಬಾಬು, ಮೂರ್ತಿ, ನಿಂಗರಾಜ್ ಇತರರು ಇದ್ದರು.