oppo_2 
ಜಿಲ್ಲೆ

ಭೀಮಾಕೋರೆಗಾಂವ ವಿಜಯೋತ್ಸವ ಡಿ.3ರಂದು

ಕಲಬುರಗಿ: ಭೀಮಪುತ್ರಿ ಬ್ರಿಗೇಡ್‌ನಿಂದ ಕಮಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಆವರಣದಲ್ಲಿ ಜ.೩ರಂದು ಭೀಮಾಕೋರೆಗಾಂವ ವಿಜಯೋತ್ಸವ, ಸಾವಿತ್ರಿ ಬಾಯಿ ಫುಲೆ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜಕುಮಾರ ತಿಳಿಸಿದರು.

ಜ.೩ರಂದು ಬೆಳಗ್ಗೆ ಕಮಲಾಪುರದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಮೂರ್ತಿ ಆವರಣದವರೆಗೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ್ಞಾನ ಪ್ರಕಾಶ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಗುರೂಜಿ, ಸಂಘ ಭಂತೇಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭೀಮಪುತ್ರಿ ರೇವತಿರಾಜ ಉದ್ಘಾಟಿಸಲಿದ್ದು, ಬ್ರಿಗೇಡ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಗದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಬಸವರಾಜ ಮತ್ತಿಮಡು, ರೇವುನಾಯಕ ಬೆಳಮಗಿ, ದಿ.ವಿಲ್‌ಕುಮಾರ ಪುಷ್ಪನಮನ ಸಲ್ಲಿಸಲಿದ್ದಾರೆ. ಅತಿಥಿಗಳಾಗಿ ತಹಸೀಲ್ದಾರ್ ಮೊಹ್ಮದ್ ಮೋಸಿನ್, ನೀಲಗಂಗಾ ಬಬಲಾದ, ಸೋಮಶೇಖರ, ವೈಜನಾಥ ತಡಕಲ್, ಶಿವಪ್ರಭು ಪಾಟೀಲ್ ಸೇರಿ ಗಣ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದ ೧೫ ಸಾಧಕರಿಗೆ ಸಾವಿತ್ರಿಬಾಯಿ ಪ್ರಶಸ್ತಿ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಜಗದೇವಿ, ನಗೀನಾ, ಶಶಿಕಲಾ, ಶ್ರೀದೇವಿ, ಸಿದ್ದು ಕಟ್ಟಿಮನಿ, ಗುಲಾಂ ನಬಿ, ಸಾಯಬಣ್ಣ ಇತರರಿದ್ದರು.