ಬೆಳಗಾವಿ : ಅತ್ಯಾಕರ್ಷಕ ಹಾಗೂ ನೂತನ ವಿನ್ಯಾಸದ ಚಿನ್ನಾಭರಣ ಹಾಗೂ ವಜ್ರಾಭರಣಗಳ ಆ್ಯಂಟಿಕ್ ಜ್ಯುವೆಲರಿಗಳಿಗೆ ಹೆಸರಾಗಿರುವ ಭೀಮ್ ಜ್ಯುವೆಲರ್ಸ್‌ನ ನೂತನ ಮಳಿಗೆ ಬೆಳಗಾವಿ ಮಹಾನಗರದಲ್ಲಿಯೂ ಕಾರ್ಯಾರಂಭ ಮಾಡಿದ್ದು, ಶುಕ್ರವಾರ ನಡೆದ ಸಮಾರಂಭದಲ್ಲಿ ಉಡುಪಿ ಕೃಷ್ಣಮಠದ ಪೇಜಾವರ ವಿಶ್ವಪ್ರಸನ್ನಾನಂದ ಸ್ವಾಮೀಜಿ ಶುಕ್ರವಾರ ಉದ್ಘಾಟನೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಕೃಷ್ಣ ಮಠಕ್ಕೂ ಭೀಮ್ ಜ್ಯುವೆಲರ್ಸ್‌ಗೂ ಅವಿನಾಭಾವ ಸಂಬಂಧವಿದೆ. ರಾಜ್ಯದಲ್ಲಿ ಈಗಾಗಲೇ 17 ಶಾಖೆಗಳನ್ನು ಹೊಂದಿದ್ದ ಭೀಮ. ಇದೀಗ 18ನೇ ಶಾಖೆಯಾಗಿ ಬೆಳಗಾವಿಯ ಬಹುದೊಡ್ಡ ಸಂಖ್ಯೆಯ ಗ್ರಾಹಕರಿಗೆ ಆಕರ್ಷಕ ಚಿನ್ನಾಭರಣ ನೀಡಲಾರಂಭಿಸಿರುವುದು ಬೆಳಗಾವಿ ಹಾಗೂ ಭೀಮ ಜ್ಯುವೆಲರ್ಸ್‌ಗೆ ಭಿಮ ಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿ ನಗರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಹಕರಿಗೂ ಅತ್ಯುತ್ತಮ ಸೇವೆ ಈ ಮಳಿಗೆಯಿಂದ ಲಭಿಸಲಿ. ಗ್ರಾಹಕರ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಸ್ವಂಸ್ಥೆಯೂ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಭೀಮ ಜ್ಯುವೆಲರ್ಸ್‌ನ ವೈವಸ್ಥಾಪಕ ನಿರ್ದೇಶಕರಾದ ಶಿಲ್ಪಾ ಭಟ್, ಮಾತನಾಡಿ, ದೇಶಾದ್ಯಂತ 50ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿ, ರಾಜ್ಯದಲ್ಲಿ 18ನೇ ಮಳಿಗೆಯನ್ನು ಸಾಂಸ್ಕೃತಿಕ ಶ್ರಿಮಂತ ನಗರಿ ಬೆಳಗಾವಿಯಲ್ಲಿ ಆರಂಭಿಸಿರುವುದು ಖುಷಿಯ ವಿಚಾರ. ಸುಮಾರು 60 ಸಾವಿರಕ್ಕೂ ಅಧಿಕ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಈ ಮಳಿಗೆಯ ಮೂಲಕ ಆಭರಣಪ್ರಿಯರಿಗೆ ಒದಗಿಸುವ ನಿಟ್ಟಿನಲ್ಲಿ ಭೀಮ್ ಜ್ಯುವೆಲರ್ಸ್ ಉತ್ಸುಕವಾಗಿದೆ. ಅಲ್ಲದೇ, ನೂತನ ಮಳಿಗೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಆಫರ್ ನೀಡಲಾಗಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಖರೀದಿಸಿದ ಪ್ರಥಮ ಗ್ರಾಹಕರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮಾಲೀಕರಾದ ಸಾವಿತ್ರಿ ಭಟ್, ವಿಷ್ಣುಶರಣ ಭಟ್, ವ್ಯವಸ್ಥಾಪಕ ನಿರ್ದೇಶಕರಾದ ರಶ್ಮಿ ಭಟ್ ಹಾಗೂ ಭವ್ಯ ಭಟ್ ಸೇರಿದಂತಯೆ ಭೀಮ್ ಜ್ಯುವೆಲರ್ಸ್‌ನ ಸಿಬ್ಬಂದಿ ಇದ್ದರು.