ಹುಬ್ಬಳ್ಳಿ: ಇಲ್ಲಿಯ ಪಾನ್ ಬಜಾರ್ ಭಾವಸಾರ ಕ್ಷತ್ರೀಯ ಸಮಾಜ ಸೇವಾ ಸಂಘ ಮತ್ತು ಪಂಚಮಂಡಳಿ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಇತರ ಶೈಕ್ಷಣಿಕ ವಸ್ತುಗಳ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಪಾಲಕರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿದ್ದ ಭಾವಸಾರ ಕ್ಷತ್ರಿಯ ಪತ್ತಿನ ಸಹಾಕಾರಿ ಸಂಘದ ಅಧ್ಯಕ್ಷ ಶಂಕರ ಕುಂಠೆ ಅವರು ಮಾತನಾಡಿದರು.
ದತ್ತಾ ಕುಂಠೆ, ಮಹಿಳಾ ಮಂಡಳದ ಕಾರ್ಯದರ್ಶಿ ಅನುಪಮಾ ಕಳಸ್ಕರ ಭಾಗವಹಿಸಿದ್ದರು. ಸೇವಾ ಸಂಘ ಅಧ್ಯಕ್ಷ ಮಹೇಶ ಸರ್ವದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಸರ್ವದೆ ಕಾರ್ಯಕ್ರಮ ನಿರೂಪಿಸಿದರು.